ರಾಜ್ಯದ ಪ್ರತಿಷ್ಟಿತ ಲೋಕಸಭಾ ಕ್ಷೇತ್ರವಾಗಿರುವ ಧಾರವಾಡ ಲೋಕಸಭಾ ಕ್ಷೇತ್ರದ ಚುನಾವಣೆ ಕುರಿತು ಧಾರವಾಡದಲ್ಲಿಂದು ಮಹತ್ವದ ಸಭೆ ನಡೆಯಲಿದೆ. ಧಾರವಾಡದ ಮಯೂರ ರೆಸಾರ್ಟ್ ನಲ್ಲಿ ಸಂಜೆ 4 ಘಂಟೆಗೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ ನೇತೃತ್ವದಲ್ಲಿ ಸಭೆ ಕರೆಯಲಾಗಿದೆ.
ಧಾರವಾಡ ಲೋಕಸಭಾ ಕ್ಷೇತ್ರವನ್ನು ತನ್ನ ಕೈ ವಶ ಮಾಡಿಕೊಳ್ಳಬೇಕು ಎಂದು ಹವಣಿಸುತ್ತಿರುವ ಕಾಂಗ್ರೇಸ್ ಪಕ್ಷದ ನಾಯಕರು ಚರ್ಚೆ ನಡೆಸಲಿದ್ದಾರೆ. ಟಿಕೇಟ್ ಪಡೆಯಲು ಹತ್ತಕ್ಕೂ ಹೆಚ್ಚು ಜನರ ನಡುವೆ ಪೈಪೋಟಿ ಇದ್ದು, ಅವರೆಲ್ಲರ ಜೊತೆ ಲಕ್ಷ್ಮೀ ಹೆಬ್ಬಾಳಕರ ಚರ್ಚೆ ನಡೆಸಲಿದ್ದಾರೆ. ಈಗಾಗಲೇ ಒಂದು ಹಂತದ ಸಭೆ ನಡೆದಿದ್ದು, ಇದೀಗ ಎರಡನೇ ಬಾರಿಗೆ ಲಕ್ಷ್ಮೀ ಹೆಬ್ಬಾಳಕರ ನೇತೃತ್ವದಲ್ಲಿ ಸಭೆ ನಡೆಯಲಿದೆ.
