ಶಿರಸಿ ಬಳಿ ಇರುವ ಶಾಲ್ಮಲಾ ನದಿಯಲ್ಲಿ ಈಜಾಡಲು ಹೋಗಿದ್ದ ಒಂದೇ ಕುಟುಂಬದ ಐವರು ಕಣ್ಮರೆಯಾದ ಘಟನೆ ನಡೆದಿದೆ. ರವಿವಾರವಾಗಿದ್ದರಿಂದ ಪಿಕ್ ನಿಕ್ ಅಂತಾ ಹೋದವರು ನೀರು ಪಾಲಾಗಿದ್ದಾರೆ.
ರಾಮನಬೈಲು ಗ್ರಾಮದ ಸಲೀಮ್ ಖಲಿಲ್ ರೆಹಮಾನ್, ನಾದಿಯಾ ನೂರ ಅಹ್ಮದ ಶೇಖ, ಮಿಸಬಾ ತಬಸ್ಸಮ್, ನಬಿಲ್ ನೂರ್ ಅಹ್ಮದ ಹಾಗೂ ಉಮರ್ ಸಿದ್ದಿಕ್ ಎಂಬ ಐವರು ನೀರಿನಲ್ಲಿ ಮುಳುಗಿ ಸಾವನ್ನಪ್ಪಿರಬಹುದು ಎಂದು ಶಂಕಿಸಲಾಗಿದೆ. ಓರ್ವನ ಶವ ಪತ್ತೆಯಾಗಿದೆ.
ಸ್ಥಳಕ್ಕೆ ಶಿರಸಿ ಗ್ರಾಮೀಣ ಠಾಣೆ ಪೊಲೀಸರು, ಮುಳುಗು ತಜ್ಞರು ಭೇಟಿ ನೀಡಿದ್ದು, ಕಾಣೆಯಾದವರ ಹುಡುಕಾಟ ನಡೆಸಿದ್ದಾರೆ.