ಕುಂದಗೋಳ ವಿಧಾನಸಭಾ ಕ್ಷೇತ್ರದ ಬಿಜೆಪಿ ಟಿಕೇಟ್ ವಂಚಿತರಾಗಿ ಪಕ್ಷೇತರರಾಗಿ ಕಣಕ್ಕಿಳಿದು ಬಿಜೆಪಿ ವಿರುದ್ಧ ಸಿಡಿದೆದ್ದಿದ್ದ ಕುಂದಗೋಳದ ಮಾಜಿ ಶಾಸಕ ಇನ್ನೇನು ಕಾಂಗ್ರೇಸ್ ಸೇರಿಯೆ ಬಿಟ್ಟರು ಎಂದು ಜನ ಮಾತಾಡಿಕೊಂಡಿದ್ದರು. ಜಗದೀಶ ಶೆಟ್ಟರ ಜೊತೆ ಬೆಂಗಳೂರಿಗೆ ಹೋಗಿ ಸಿದ್ದರಾಮಯ್ಯ ಹಾಗೂ ಡಿ ಕೆ ಶಿವಕುಮಾರರನ್ನು ಭೇಟಿ ಮಾಡಿ ಬಂದಿದ್ದರು.
ಇದ್ದಕ್ಕಿದ್ದಂತೆ ಬಿಜೆಪಿ ಪಕ್ಷದಲ್ಲಿ ಬದಲಾದ ರಾಜಕೀಯ ಸನ್ನಿವೇಶ ಎಸ್ ಐ ಚಿಕ್ಕನಗೌಡರ, ವಲಸೆ ಹೋಗುವದನ್ನು ತಪ್ಪಿಸಿದೆ. ರಾಜ್ಯ ಬಿಜೆಪಿ ಅಧ್ಯಕ್ಷರಾಗಿ ವಿಜಯೇಂದ್ರ ನೇಮಕದ ಬಳಿಕ, ಎಸ್ ಐ ಚಿಕ್ಕನಗೌಡರ ತಟಸ್ಥರಾಗಿದ್ದಾರೆ. ಬಿ ಎಸ್ ಯಡಿಯೂರಪ್ಪನವರ ಸಂಬಂದಿಕರು ಆಗಿರುವ ಎಸ್ ಐ ಚಿಕ್ಕನಗೌಡರ ಇದೀಗ ಮನಸ್ಸು ಬದಲಿಸಿದ್ದಾರೆ ಎಂದು ಹೇಳಲಾಗಿದೆ.
ವಿಜಯೇಂದ್ರ, ರಾಜ್ಯ ಬಿಜೆಪಿ ಅಧ್ಯಕ್ಷರಾದ ಬಳಿಕ ಖುದ್ದು ಬಿ ಎಸ್ ಯಡಿಯೂರಪ್ಪನವರು, ಚಿಕ್ಕನಗೌಡರರನ್ನು ಕರೆಸಿಕೊಂಡು ಪ್ರಸಕ್ತ ರಾಜಕಾರಣದ ಬಗ್ಗೆ ಚರ್ಚಿಸಿದ್ದಾರೆ. ಸ್ವಲ್ಪ ದಿನ ಸುಮ್ಮನಿರುವಂತೆ ಹೇಳಿದ್ದಾರೆ ಎನ್ನಲಾಗಿದೆ. ಬಿ ಎಸ್ ಯಡಿಯೂರಪ್ಪನವರ ಮಾತಿಗೆ ಮನ್ನಣೆ ಕೊಟ್ಟು ಅದರಗುಂಚಿ ಗೌಡರು ಕಾಂಗ್ರೇಸ್ ಸೇರುವದು ಡೌಟ್ ಎಂದೆ ಹೇಳಲಾಗುತ್ತಿದೆ.