ವಿಶ್ವವನ್ನೇ ನಡುಗಿಸಿದ್ದ ಕೊರೋನಾ ವೈರಸ್, ಇದೀಗ ರೂಪಾಂತರಗೊಂಡು ರಾಜ್ಯಕ್ಕೆ ಒಕ್ಕರಿಸಿದೆ. JN.1 ಹೆಸರಿನ ವೈರಸ್ ಗೆ ಇಂದು ರಾಜ್ಯದಲ್ಲಿ ಇಬ್ಬರು ಬಲಿಯಾಗಿದ್ದಾರೆ. ಮೈಸೂರು ಜಿಲ್ಲೆಯಲ್ಲಿ ಒಬ್ಬರು ಹಾಗೂ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಒಬ್ಬರು ಮೃತಪಟ್ಟಿದ್ದಾರೆ.
ಬೆಂಗಳೂರು ಒಂದರಲ್ಲಿಯೇ 376 ಕೋವಿಡ ಪಾಸಿಟಿವ್ ಬಂದವರಿದ್ದು, ರಾಜ್ಯದಲ್ಲಿ ಇವತ್ತಿನ ತನಕ 464 ಪಾಸಿಟಿವ್ ಕೇಸಗಳು ಬಂದಿವೆ. ರಾಜ್ಯದ ಆರೋಗ್ಯ ಇಲಾಖೆ ಕೋವಿಡ ಎದುರಿಸಲು ಸನ್ನದ್ದವಾಗಿದ್ದು, ಮುಂಜಾಗ್ರತೆ ವಹಿಸಿದೆ.