“ಹಿಜಾಬ್ ವಿಚಾರವಿಟ್ಟು ರಾಜಕೀಯ ಮಾಡಬೇಡಿ. ಅದು ಒಂದು ಧಾರ್ಮಿಕ ಸ್ವಾತಂತ್ರ್ಯ ದ ಭಾಗವಾಗಿದೆ. ರಾಜಕೀಯ ಲಾಭದ ಉದ್ದೇಶಕ್ಕಾಗಿ ಯಾವುದೇ ರಾಜಕೀಯ ಪಕ್ಷ ಹಿಜಾಬ್ ಪ್ರಕರಣವನ್ನು ಬಳಸಬಾರದು ಎಂದು ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ದ ಕರ್ನಾಟಕ ರಾಜ್ಯಾಧ್ಯಕ್ಷ ತಾಹೇರ್ ಹುಸೇನ್ ತಿಳಿಸಿದ್ದಾರೆ.
ಮುಸ್ಲಿಂ ಸಮುದಾಯದ ಮಹಿಳೆಯರ ವಿರುದ್ದ ಅವಹೇಳನಕಾರಿ ಮಾತುಗಳನ್ನಾಡಿ ಪ್ರಚೋದಿಸಿದ ಪ್ರಭಾಕರ್ ಭಟ್ಟರ ವಿರುದ್ದ ಸರಕಾರ ಕಾನೂನು ಕ್ರಮಕೈಗೊಳ್ಳಬೇಕು. ಭಟ್ಟರ ವಿರುದ್ದ ಸರಕಾರ ಕ್ರಮ ಕೈಗೊಳ್ಳಲು ಸರಕಾರ ಏಕೆ ಹಿಂದೇಟು ಹಾಕುತ್ತಿದೆ.? ಇವರನ್ನು ತಡೆಯುವ ಶಕ್ತಿ ಯಾವುದು? ಈ ವಿಚಾರದಲ್ಲಿ ಗ್ರಹ ಸಚಿವರ ಮೌನ, ಸಂಶಯಾಸ್ಪದವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.