ಅಯೋಧ್ಯೆಯಲ್ಲಿನ ಶ್ರೀರಾಮ ಮಂದಿರಕ್ಕೆ ತಮಿಳುನಾಡಿನಿಂದ ಬ್ರಹತ್ ಗಂಟೆಗಳನ್ನು ರವಾನಿಸಲಾಗಿದೆ. ಒಂದೊಂದು ಗಂಟೆ (bell ) ತಲಾ 2 ಟನ್ ತೂಕವಿದ್ದು , ಒಟ್ಟು 42 ಗಂಟೆಗಳು ರಾಮ ಮಂದಿರಕ್ಕೆ ತಲುಪಲಿವೆ.
ಈ ಬ್ರಹತ್ ಗಂಟೆಗಳನ್ನು ತಮಿಳುನಾಡಿನ ನಾಮಕ್ಕಲ್ ಜಿಲ್ಲೆಯಲ್ಲಿ ತಯಾರಿಸಲಾಗಿದ್ದು, ವಿಶೇಷ ಪೂಜೆಯ ನಂತರ ಒಟ್ಟು 42 ಗಂಟೆಗಳನ್ನು ಕಳಿಸಲಾಗಿದೆ. ಮತ್ತೊಂದೆಡೆ ಲಖನೌದ ತರಕಾರಿ ಮಾರಾಟಗಾರ ಅನೀಲ್ ಕುಮಾರ ಸಾಹು ಎಂಬಾತ ಅಯೋಧ್ಯೆಯ ರಾಮ ಮಂದಿರಕ್ಕೆ ಏಕಕಾಲಕ್ಕೆ 9 ದೇಶಗಳ ಸಮಯವನ್ನು ತೋರಿಸುವ ವಿಶಿಷ್ಟ ಗಡಿಯಾರವನ್ನು ನೀಡಿದ್ದಾನೆ.