ಅಯೋಧ್ಯೆಯಲ್ಲಿ ಶ್ರೀರಾಮನ ಮೂರ್ತಿ ಪ್ರತಿಷ್ಟಾಪನೆ ಸುದ್ದಿ ಬಂದಿದ್ದೆ ತಡ, ರಾಮನ ಭಕ್ತರು ಒಂದಿಲ್ಲೂಂದು ತರದ ಭಕ್ತಿ ಸೇವೆ ಸಮರ್ಪಿಸುತ್ತಿದ್ದಾರೆ. ದೇಶದಲ್ಲಿಯೆ ದೊಡ್ಡದಾದ ಅಗರಬತ್ತಿಯೊಂದು ಶ್ರೀರಾಮನ ಮುಂದೆ ಸುವಾಸನೆ ಹರಡಲಿದೆ.
ಈ ಅಗರಬತ್ತಿ 108 ಅಡಿ ಉದ್ದ ಮತ್ತು 3500 ಕೆಜಿ ತೂಕವಿದೆ. ಅಗರಬತ್ತಿಯನ್ನು ಅಯೋಧ್ಯೆಗೆಂದೆ ತಯಾರಿಸಲಾಗಿದೆ. ಇದು ಅಯೋಧ್ಯೆಯಲ್ಲಿ ನಿರಂತರವಾಗಿ 45 ದಿನಗಳವರೆಗೆ ಪರಿಮಳಯುಕ್ತವಾಗಿರುತ್ತದೆ. ರಾಮಲಾಲನ ಸಿಂಹಾಸನಾರೋಹಣಕ್ಕೂ ಮುನ್ನ ಈ ಬೃಹತ್ ಅಗರಬತ್ತಿ ಅಯೋಧ್ಯೆ ತಲುಪಿದೆ.