ಅಯೋಧ್ಯೆಯಲ್ಲಿ ಇದೇ ದಿನಾಂಕ 22 ರಂದು ಶ್ರೀರಾಮನ ಪ್ರತಿಮೆ ಅನುಷ್ಟಾನಗೊಳ್ಳಲಿದ್ದು, ದೇಶದಾಧ್ಯಂತ ಸಂಭ್ರಮ ಸಡಗರ ಮನೆ ಮಾಡಿದೆ.
ಧಾರವಾಡದ ಪ್ರಖ್ಯಾತ ಕಲಾವಿಧ ಮಂಜುನಾಥ ಹಿರೇಮಠರ ಮಗ ವಿನಾಯಕ ಮಣ್ಣಿನಲ್ಲಿ ಶ್ರೀರಾಮನ ವಿಗ್ರಹ ತಯಾರಿಸಿದ್ದಾನೆ. 21 ವರ್ಷ ವಯಸ್ಸಿನ ವಿನಾಯಕ ಹಿರೇಮಠ ಕೈಚಳಕದಲ್ಲಿ ಮೂಡಿ ಬಂದ 15 ಇಂಚಿನ ಶ್ರೀರಾಮನ ವಿಗ್ರಹ ಆಕರ್ಷಕವಾಗಿದೆ. ಅಯೋಧ್ಯೆಯಲ್ಲಿ ನಡೆಯುವ ಕಾರ್ಯಕ್ರಮದ ನೆನಪಿಗಾಗಿ ವಿನಾಯಕ ಮಣ್ಣಿನ ಶ್ರೀರಾಮ ವಿಗ್ರಹ ತಯಾರಿ ಮಾಡಿ ಗಮನ ಸೆಳೆದಿದ್ದಾನೆ.