ಉತ್ತರ ಕರ್ನಾಟಕದ ಎರಡನೇ ಅತೀ ದೊಡ್ಡ ಸಂಸ್ಥೆಯಾಗಿರುವ ಧಾರವಾಡ ಅಂಜುಮನ್ ಸಂಸ್ಥೆಯ ಆಡಳಿತ ಮಂಡಳಿ ಚುನಾವಣೆಗೆ ಅಖಾಡಾ ಸಜ್ಜಾಗಿದೆ.
ಕಾಂಗ್ರೇಸ್ ಮುಖಂಡ ಇಸ್ಮಾಯಿಲ್ ತಮಟಗಾರ ಮತ್ತೆ ಅಧ್ಯಕ್ಷ ಸ್ಥಾನಕ್ಕೆ ಇಂದು ನಾಮಪತ್ರ ಸಲ್ಲಿಸಿದರು. ಈಗಾಗಲೇ ಎರಡು ಬಾರಿ ಅಂಜುಮನ್ ಅಧ್ಯಕ್ಷರಾಗಿದ್ದ ಇಸ್ಮಾಯಿಲ್ ತಮಟಗಾರ ಕಳೆದ ಅವಧಿಗೆ ತಮ್ಮ ಬೆಂಬಲಿಗರಿಗೆ ಅಧ್ಯಕ್ಷರನ್ನಾಗಿ ಮಾಡಿದ್ದರು. ಇಸ್ಮಾಯಿಲ್ ತಮಟಗಾರ ಜೊತೆ, ಇಕ್ಬಾಲ್ ಜಮಾದಾರ, ನಜೀರ್ ಮನಿಯಾರ್, ರಫೀಕ್ ಶಿರಹಟ್ಟಿ, ಬಶೀರ ಜಹಗಿರದಾರ, ಮುಸ್ತಾಕ್ ಸರ್ಗಿರೋ, ಶಫಿ ಕಳ್ಳಿಮನಿ, ಇಕ್ಬಾಲ್ ಲಗದಗ್, ಎಮ್ ಎ ಪಠಾಣ, ಅನಿಸ್ ಮಾಣಿಕ್, ದಾವಲ ಬಿಜಾಪುರ ಸಹ ಬೇರೆ ಬೇರೆ ಸ್ಥಾನಗಳಿಗೆ ನಾಮಪತ್ರ ಸಲ್ಲಿಸಿದರು.
ಜನೇವರಿ 15, ನಾಮಪತ್ರ ಸಲ್ಲಿಸಲು ಕೊನೆಯ ದಿನವಾಗಿದ್ದು, 16 ರಂದು ನಾಮಪತ್ರಗಳ ಪರಿಶೀಲನೆ ನಡೆಯಲಿದೆ. ನಾಮಪತ್ರ ವಾಪಸ ಪಡೆಯಲು ಜನೇವರಿ 17 ಕೊನೆಯ ದಿನವಾಗಿದೆ. 28 ರಂದು ಮತದಾನ ನಡೆಯಲಿದ್ದು, ಅಂದೆ ಸಾಯಂಕಾಲ ಮತ ಏಣಿಕೆ ಸಹ ನಡೆದು ಫಲಿತಾಂಶ ಹೊರಬೀಳಲಿದೆ.