ರಾಜ್ಯದ ಪ್ರತಿಷ್ಟಿತ ಲೋಕಸಭಾ ಕ್ಷೇತ್ರವಾಗಿರುವ ಧಾರವಾಡ ಲೋಕಸಭಾ ಕ್ಷೇತ್ರದಲ್ಲಿ ಹುಬ್ಬಳ್ಳಿ ವಿದ್ಯಾನಗರ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ರಜತ್ ಉಳ್ಳಾಗಡ್ಡಿಮಠ ಪಕ್ಷ ಸಂಘಟಿಸುವತ್ತ ದೃಷ್ಟಿ ಹರಿಸಿದ್ದಾರೆ. ಕಾಂಗ್ರೇಸ್ ಪಕ್ಷದ ಲೋಕಸಭಾ ಟಿಕೇಟ್ ಅಕಾಂಕ್ಷಿಯಾಗಿರುವ ರಜತ್ ಉಳ್ಳಾಗಡ್ಡಿಮಠ ಇಂದು ಶಿಗ್ಗಾವ ವಿಧಾನಸಭಾ ಕ್ಷೇತ್ರದ ವಿವಿಧ ಹಳ್ಳಿಗಳಲ್ಲಿ ಕಾಂಗ್ರೇಸ್ ಕಾರ್ಯಕರ್ತರನ್ನು ಭೇಟಿ ಮಾಡಿದರು.
ಬಿಜೆಪಿ ಶಾಸಕರು ಇರುವ ಕ್ಷೇತ್ರದಲ್ಲಿ ಓಡಾಡುತ್ತಿರುವ ರಜತ್ ಉಳ್ಳಾಗಡ್ಡಿಮಠ, ಕೈ ಕಾರ್ಯಕರ್ತರ ವಿಶ್ವಾಸ ಗಳಿಸುತ್ತಿದ್ದಾರೆ. ಪ್ರಭಲ ಅಕಾಂಕ್ಷಿಯಾಗಿರುವ ರಜತ್ ಎಲ್ಲಾ ವರ್ಗದ ಜನರನ್ನು ಭೇಟಿ ಮಾಡುತ್ತಿದ್ದು, ಚುನಾವಣೆಗೂ ಮುನ್ನ ಮೈದಾನಕ್ಕೆ ಧುಮುಕಿದ್ದಾರೆ. ಅಖಾಡಾ ರಂಗೇರಿಸಿದ್ದಾರೆ.