23-24 ಸಾಲಿನ ಹಾಲು ಉತ್ಪಾದಕರಿಗೆ ಉತ್ತೇಜನ ಕಾರ್ಯಕ್ರಮದ ಅನುದಾನದಲ್ಲಿ ರಾಜ್ಯ ಅಭಿವೃದ್ಧಿ ಪರಿಷತ್ ನಡಾವಳಿಯಂತೆ ಸಭೆಯ ಫಲಾನುಭವಿಗಳಿಗೆ ಒಂದು ಮಿಶ್ರ ತಳಿ ಹಸು ಘಟಕವನ್ನು ಅನುಷ್ಠಾನಗೊಳಿಸುವ ಯೋಜನೆಗೆ ಫಲಾನುಭವಿ ಆಯ್ಕೆ ಹಾಗೂ ಮೇಲ್ವಿಚಾರಣೆ ಸಮಿತಿಗೆ ಅಧಿಕಾರೇತರ ಸದಸ್ಯರನ್ನಾಗಿ ಧಾರವಾಡ ಪೂರ್ವ ಮೀಸಲು ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಮುಖಂಡ ಸಾಧಿಕಖಾನ ಹಕೀಂ ಅವರನ್ನು ನಾಮನಿರ್ದೆಶನ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ತನ್ನನ್ನ ನೇಮಕ ಮಾಡಿದ ರಾಜ್ಯ ಸರ್ಕಾರಕ್ಕೆ ಅಭಿನಂದನೆ ಸಲ್ಲಿಸಿರುವ ಸಾಧಿಕಗೆ ಸಮಾಜದ ಮುಖಂಡರು ಸನ್ಮಾನಿಸಿದ್ದಾರೆ.
