ನಾಲ್ಕು ಬಾರಿ ಸಂಸದರಾಗಿರುವ ಪ್ರಲ್ಲಾದ ಜೋಶಿ ನಿಜವಾದ ಜಾತ್ಯತೀತ ವ್ಯಕ್ತಿ ಎಂದು ಬಿಜೆಪಿ ಮುಖಂಡ ಮೋಹನ ರಾಮದುರ್ಗ ಹೇಳಿದ್ದಾರೆ.
ಪ್ರಭುದ್ಧತೆ ಇಲ್ಲದವರು, ಜಾತಿ ವಿಷಯ ಎಳೆದು ತಂದಿದ್ದು, ಕನ್ನಡ ಸಂಸ್ಕೃತಿ ಸಚಿವರು ಸಂಸ್ಕೃತಿ ಮರೆತು ಮಾತನಾಡುತ್ತಿರುವದು ಖಂಡನೀಯ ಎಂದರು. ಚುನಾವಣೆ ಸಮಯದಲ್ಲಿ ಜಾತಿ ವಿಚಾರ ಮುಂದಿಟ್ಟುಕೊಂಡು ಮತದಾರರ ಗಮನ ಸೆಳೆಯಲು ಯತ್ನ ಮಾಡುತ್ತಿದ್ದು, ಅದು ಫಲಿಸಲ್ಲ ಎಂದು ಮೋಹನ ರಾಮದುರ್ಗ ಹೇಳಿದ್ದಾರೆ.