Download Our App

Follow us

Search
Close this search box.
Home » ಕರ್ನಾಟಕ » ಶಮನಗೊಂಡ ಶಿಗ್ಗಾವಿ ಕಾಂಗ್ರೇಸ್ಸಿನ ಆಂತರಿಕ ಸಮರ. ಪಠಾಣ ಗೆಲ್ಲಿಸಿಕೊಂಡು ಬಂದಲ್ಲಿ ಖಾದ್ರಿಗೆ ಒಲಿಯಲಿದೆ ಎಂ ಎಲ್ ಸಿ ಸ್ಥಾನ

ಗಾಂಜಾ ನಗರಿಯಾಗುತ್ತಿದೆ ಪೇಡಾ ನಗರಿ ಧಾರವಾಡ. ಕಡಿವಾಣ ಹಾಕೋರು ಯಾರು?

ಶೈಕ್ಷಣಿಕ ಕಾಶಿ ಧಾರವಾಡದಲ್ಲಿ ನಡೆಯುತ್ತಿರುವ ಆಕ್ರಮ ಚಟುವಟಿಕೆಗಳು ಸುಸಂಸ್ಕೃತ ಜನರನ್ನು ಹೈರಾಣಾಗಿಸಿವೆ. ಆಕ್ರಮ ಗಾಂಜಾ ಮಾರಾಟವಂತು ಜನರ ನೆಮ್ಮದಿಗೆ ಕೊಳ್ಳೆ ಇಟ್ಟಿದೆ. 

ಸುಸಂಸ್ಕೃತ ಜನರ ನೆಮ್ಮದಿಗೆ ಭಂಗ ತಂದಿರುವ ಪುಡಿ ರೌಡಿಗಳು ಎಲ್ಲೆಂದರಲ್ಲಿ ಗಾಂಜಾ ನಶೆಯಲ್ಲಿ ಹೊಡೆದಾಡಿಕೊಳ್ಳುತ್ತಿದ್ದಾರೆ. 18 ರಿಂದ 25 ವಯಸ್ಸಿನ ನಡುವಿನ ಯುವಕರು ಗಾಂಜಾ ವ್ಯಸನಿಗಳಾಗುತ್ತಿದ್ದು, ಇದು ಧಾರವಾಡದ ಕೆಲ ಕಾಲೇಜಿನ ವಿಧ್ಯಾರ್ಥಿಗಳವರೆಗೂ ವ್ಯಾಪಿಸಿದೆ. ಧಾರವಾಡದ ಪೊಲೀಸರು ಅಪರಾಧ ಲೋಕಕ್ಕೆ ಸವಾಲಾದ ಪ್ರಕರಣಗಳನ್ನು ಭೇಧಿಸುವಲ್ಲಿ ಹೆಸರು ಮಾಡಿದ್ದಾರೆ. ಆದ್ರೆ ಅದ್ಯಾಕೋ ಧಾರವಾಡದಲ್ಲಿನ ಗಾಂಜಾ ಅಡ್ಡೆಗಳು ಕ್ರೈಮ್ ಪೊಲೀಸರ ಕಣ್ಣಿಗೆ ಬೀಳದಿರುವದು ಸಂಶಯಕ್ಕೆಡೆಮಾಡಿದೆ. 

ಗಾಂಜಾ ಮಾರಾಟವಾಗುವ ಅಡ್ಡೆಗಳು ಕ್ರೈಮ್ ಪೊಲೀಸರಿಗೆ ಗೊತ್ತಿಲ್ಲ ಅಂತಿಲ್ಲ. ಅದ್ಯಾಕೋ ಅವರನ್ನು ಹೆಡಮುರಿಗೆ ಕಟ್ಟಲು ಮನಸ್ಸು ಮಾಡುತ್ತಿಲ್ಲ. ಅದ್ಯಾವ ” ಕೈ ” ಗಳು ಅವರಿಗೆ ಕಟ್ಟಿ ಹಾಕಿವೆ ಅನ್ನೋದು ಗೊತ್ತಾಗುತ್ತಿಲ್ಲ. ವಿಧ್ಯಾಗಿರಿ ಪೊಲೀಸ ಠಾಣೆ, ಶಹರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಗಾಂಜಾ ಮಾರುವವರು, ಯಾರ ಹೆದರಿಕೆಯಿಲ್ಲದೆ ವಹಿವಾಟು ನಡೆಸಿದ್ದಾರೆ. ಜನ ಬೀದಿಗೆ ಇಳಿಯುವ ಮುನ್ನ ಇಲಾಖೆ ಎಚ್ಚೆತ್ತಕೊಳ್ಳಬೇಕಿದೆ. ದಕ್ಷ ಕಮಿಷನರ್ ಎಂದು ಹೆಸರು ಮಾಡಿರುವ ಶ್ರೀಮತಿ ರೇಣುಕಾ ಸುಕುಮಾರ, ಅವರು ಗಾಂಜಾ ಮುಕ್ತ ಧಾರವಾಡ ಮಾಡಬೇಕಿದೆ.

Karnataka Files
Author: Karnataka Files

Leave a Comment

RELATED LATEST NEWS

Top Headlines

ಶಮನಗೊಂಡ ಶಿಗ್ಗಾವಿ ಕಾಂಗ್ರೇಸ್ಸಿನ ಆಂತರಿಕ ಸಮರ. ಪಠಾಣ ಗೆಲ್ಲಿಸಿಕೊಂಡು ಬಂದಲ್ಲಿ ಖಾದ್ರಿಗೆ ಒಲಿಯಲಿದೆ ಎಂ ಎಲ್ ಸಿ ಸ್ಥಾನ

ಹಾವೇರಿ ಜಿಲ್ಲೆಯ ಶಿಗ್ಗಾವಿ ಉಪ ಚುನಾವಣಾ ಕಣ ದಿನದಿಂದ ದಿನಕ್ಕೆ ಸಂಚಲನ ಮೂಡಿಸುತ್ತಿದೆ. ಯಾಸಿರ್ ಖಾನ್ ಪಠಾಣ ಕಾಂಗ್ರೇಸ್ ಅಭ್ಯರ್ಥಿಯಾಗಿ ಘೋಷಣೆಯಾದ ಬೆನ್ನಲ್ಲೇ ಬಂಡೆದಿದ್ದ ಮಾಜಿ ಶಾಸಕ

Live Cricket

error: Content is protected !!