ಶಾಲಾ ಪುಸ್ತಕಗಳನ್ನು ಸಮಯಕ್ಕೆ ಸರಿಯಾಗಿ ಒದಗಿಸಲು ಎಲ್ಲಾ ಪ್ರಯತ್ನಗಳನ್ನು ಮಾಡಲಾಗುತ್ತಿದೆ ಎಂದು NCERT ಹೇಳಿದೆ. ಈಗಾಗಲೇ, 1, 2, 7, 8, 10 ಮತ್ತು 12ನೇ ತರಗತಿಯ ಸುಮಾರು 33 ಲಕ್ಷ ಪುಸ್ತಕಗಳನ್ನು ಮುದ್ರಿಸಿ ಪುಸ್ತಕ ಮಳಿಗೆಗಳಿಗೆ ತಲುಪಿಸಲಾಗಿದೆ.
3 ಮತ್ತು 6 ನೇ ತರಗತಿಯ ಹೊಸ ಪಠ್ಯಕ್ರಮದ ಪುಸ್ತಕಗಳನ್ನು ಈ ತಿಂಗಳು ಅಥವಾ ಮೇನಲ್ಲಿ ಪ್ರಕಟಿಸಲಾಗುವದು ಎಂದು ತಿಳಿಸಿದ್ದು, ಪೋಷಕರು ಗಾಬರಿಯಾಗುವ ಅವಶ್ಯಕತೆ ಇಲ್ಲಾ ಎಂದು ಹೇಳಿದೆ.
