ಧಾರವಾಡ ಲೋಕಸಭಾ ಕ್ಷೇತ್ರದ ಕಾಂಗ್ರೇಸ್ ಅಭ್ಯರ್ಥಿ ವಿನೋದ ಅಸೂಟಿ ಪರವಾಗಿ ಇಂದು ಕುಂದಗೋಳ ವಿಧಾನಸಭಾ ಕ್ಷೇತ್ರದಲ್ಲಿ ಅಬ್ಬರದ ಪ್ರಚಾರ ನಡೆಸಲಾಯಿತು.
ಮಾಜಿ ಶಾಸಕಿ ಕುಸುಮಾವತಿ ಶಿವಳ್ಳಿ, ಮುಖಂಡ ಶಿವಾನಂದ ಬೆಂತೂರ ಸೇರಿದಂತೆ ಅನೇಕ ಮುಖಂಡರ ಸಮ್ಮುಖದಲ್ಲಿ ಮನೆ ಮನೆಗೆ ತೆರಳಿ ಮತಯಾಚನೆ ಮಾಡಲಾಯಿತು. ಹರ್ಲಾಪುರ, ಸುಲ್ತಾನಪುರ ಸೇರಿದಂತೆ ಹತ್ತಾರು ಹಳ್ಳಿಗಳಲ್ಲಿ ಸಂಚರಿಸಿದ ವಿನೋದ ಅಜ್ಜಾ ವೋಟ್ ಹಾಕು, ಅಕ್ಕ ವೋಟ್ ಹಾಕು ಎಂದು ಮತಯಾಚನೆ ಮಾಡುತ್ತಿದ್ದರೆ, ಗ್ರಾಮಸ್ಥರು ಅಕ್ಕರೆಯ ಪ್ರೀತಿಯಿಂದ ಮಾತನಾಡಿಸುತ್ತಿದ್ದರು.
ಹರ್ಲಾಪೂರದ ಗ್ರಾಮದೇವತೆ ಹಾಗೂ ಸುಲ್ತಾನಪುರದ ಭಾಗ್ಯ ದುರ್ಗಾದೇವಿ ದೇವಸ್ಥಾನಗಳಿಗೆ ಭೇಟಿ ನೀಡಿ ಆಶೀರ್ವಾದ ಪಡೆಯಲಾಯಿತು. ಈ ಬಾರಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯನ್ನು ಪ್ರಚಂಡ ಬಹುಮತದಿಂದ ಆರಿಸಿ ತರಬೇಕೆಂದು ಮತದಾರರಲ್ಲಿ ವಿನಂತಿಸಿಕೊಳ್ಳಲಾಯಿತು.
ಈ ಸಂದರ್ಭದಲ್ಲಿ ಲೋಕಸಭಾ ಮತಕ್ಷೇತ್ರದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ವಿನೋದ ಅಸೂಟಿ, ಕುಂದಗೋಳ ಮಾಜಿ ಶಾಸಕರಾದ ಶ್ರೀ ಕುಸುಮಾವತಿ ಶಿವಳ್ಳಿ, ವೆಂಕನಗೌಡ್ರ ಹಿರೆಗೌಡ್ರ, ಷಣ್ಮುಖ ಶಿವಳ್ಳಿ, ಶಿವಾನಂದ ಬೆಂತೂರ, ಮಂಜುನಾಥ್ ಮಾಳಪ್ಪನವರ್, ಧೃತಿ ಸಾಲ್ಮನಿ, ಹರ್ಲಾಪೂರ ಹಾಗೂ ಸುಲ್ತಾನಪೂರ ಗ್ರಾಮಗಳ ಪಂಚಾಯತ್ ಸದಸ್ಯರು ಹಾಗೂ ಪಕ್ಷದ ಅಭಿಮಾನಿಗಳು, ಹಿರಿಯರು, ಮಹಿಳೆಯರು ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು.