ನೇಹಾ ಹಿರೇಮಠಳನ್ನು ಬರ್ಬರವಾಗಿ ಕೊಲೆ ಮಾಡಿರುವ ಮುನವಳ್ಳಿಯ ಫಯಾಜ ಕೊಂಡೋನಾಯಕ, ತನ್ನ ತಂದೆಯನ್ನೇ ಕೊಲೆ ಮಾಡಲು ಯತ್ನಿಸಿದ್ದ ಘಟನೆ ಬೆಳಕಿಗೆ ಬಂದಿದೆ.
ಮುನವಳ್ಳಿಯ ಫಯಾಜ, ತಂದೆ ತಾಯಿ ಬೇರೆಯಾದ ಮೇಲೆ ಹೆಡಮಾಸ್ಟರ ಆಗಿರುವ ತಾಯಿಯ ಜೊತೆ ವಾಸವಿದ್ದ. ಫಯಾಜ ತಂದೆಯಿಂದ ದೂರವಾದ ಬಳಿಕ, ತಂದೆ ಗಳಿಸಿದ್ದ ಆಸ್ತಿ ಮೇಲೆ ಕಣ್ಣು ಹಾಕಿದ್ದ.
ಹೆಂಡತಿಯಿಂದ ದೂರ ಆಗಿದ್ದ ಫಯಾಜ ತಂದೆ ಬಾಬುಸಾಹೇಬ ಸಣ್ಣ ಪುಟ್ಟ ವ್ಯವಹಾರ ಮಾಡುತ್ತಿದ್ದ. ಬಾಬುಸಾಹೇಬ ಮುನವಳ್ಳಿಯಲ್ಲಿ ಜನರ ಪ್ರೀತಿ ಗಳಿಸಿದ್ದ. ಜನ ಬಾಬುಸಾಬನನ್ನು ಮುನವಳ್ಳಿಯ ಜನ ಪ್ರೀತಿಯಿಂದ ಭವಾನಿ ಎಂದು ಈಗಲೂ ಕರೆಯುತ್ತಾರೆ.
ಮುನವಳ್ಳಿಯ ಹೃದಯಭಾಗದಲ್ಲಿ ಬಾಬುಸಾಹೇಬ ಗಳಿಸಿದ ಆಸ್ತಿಯ ಮೇಲೆ ಕಣ್ಣು ಹಾಕಿದ್ದ ಮಗ ಫಯಾಜ, ಅದೊಂದು ದಿನ ತಂದೆಯ ಜೊತೆ ಜಗಳ ತೆಗೆದಿದ್ದ. ಆ ಜಗಳ ಪೊಲೀಸ್ ಠಾಣೆ ಮೆಟ್ಟಲೇರಿತ್ತು. ಠಾಣೆಯ ಮುಂದೆಯೇ ಫಯಾಜ, ಅಪ್ಪನ ಮೇಲೆ ಹಲ್ಲೆ ಮಾಡಿದ್ದ. ಇನ್ನೇನು ಮಾರಣಾಂತಿಕವಾಗಿ ಹೊಡಿಬೇಕು ಅನ್ನುವಷ್ಟರಲ್ಲಿ ಬಾಬುಸಾಬ ಠಾಣೆ ಒಳಗೆ ಹೋಗಿ ಬಚಾವಾಗಿದ್ದಾನೆ. ತಂದೆಯ ಬಗ್ಗೆ ಊರಲ್ಲಿ ಉತ್ತಮ ಹೆಸರಿದ್ದು, ಮಗ ಫಯಾಜ ಮಾತ್ರ ಕಿರಿಕ್ ಮಾಡ್ತಾನೆ ಇದ್ದ ಎನ್ನಲಾಗಿದೆ.
