ನೇಹಾ ಹಿರೇಮಠ ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಧಾರವಾಡ ಅಂಜುಮನ್ ಇಸ್ಲಾಂ ಸಂಸ್ಥೆ ಐತಿಹಾಸಿಕ ನಿರ್ಧಾರ ತೆಗೆದುಕೊಂಡಿದೆ.
ಧಾರವಾಡದಲ್ಲಿರುವ ಅಂಜುಮನ್ ಇಸ್ಲಾಮ್ ಶಿಕ್ಷಣ ಸಂಸ್ಥೆಯಲ್ಲಿ ಇರುವ ಒಂದು ತರಗತಿಯ ಕೊಠಡಿಗೆ ನೇಹಾ ಹಿರೇಮಠ ಹೆಸರು ಶಾಶ್ವತವಾಗಿ ಇಡಲು ತೀರ್ಮಾನ ತೆಗೆದುಕೊಂಡಿರುವದಾಗಿ ಕಾಂಗ್ರೇಸ್ ಮುಖಂಡ ಹಾಗೂ ಅಂಜುಮನ್ ಅಧ್ಯಕ್ಷ ಇಸ್ಮಾಯಿಲ್ ತಮಟಗಾರ ತಿಳಿಸಿದ್ದಾರೆ.
ನೇಹಾ ಹಿರೇಮಠ ಹೆಸರಿನಲ್ಲಿ ಇರುವ ಕೊಠಡಿ ಉದ್ಘಾಟನೆಯನ್ನು ನೇಹಾ ಪಾಲಕರಿಂದ ನೆರವೇರಿಸುವದಾಗಿ ಹೇಳಿದ್ದಾರೆ.
ನೇಹಾ, ಸಾವು ನಾಡಿನ ಮುಸ್ಲಿಮ್ ಸಮಾಜಕ್ಕೆ ಬಹಳಷ್ಟು ನೋವು ಕೊಟ್ಟಿದ್ದು, ನಾಳೆ ಧಾರವಾಡದಲ್ಲಿ ಬೃಹತ್ ಮೌನ ಮೆರವಣಿಗೆ ನಡೆಸಿ ನಿಜವಾದ ಶೃದ್ದಾಂಜಲಿ ಸಲ್ಲಿಸುವದಾಗಿ ಇಸ್ಮಾಯಿಲ್ ತಮಟಗಾರ ಹೇಳಿದ್ದಾರೆ.
ನೇಹಾ ಕೊಲೆ ಆರೋಪಿ ಫಯಾಜ್ ಗೆ ಕಠಿಣ ಶಿಕ್ಷೆ ಕೊಡಬೇಕೆಂದು ಆಗ್ರಹಿಸಿರುವ ಅಂಜುಮನ್ ಸಂಸ್ಥೆ, ತೀವ್ರಗತಿಯಲ್ಲಿ ಪ್ರಕರಣದ ವಿಚಾರಣೆ ನಡೆಸಬೇಕೆಂದು ಆಗ್ರಹಿಸಿದೆ.