ರಾಷ್ಟ್ರವ್ಯಾಪಿ ದೊಡ್ಡ ಸುದ್ದಿ ಮಾಡಿರುವ ಹುಬ್ಬಳ್ಳಿಯ ನೇಹಾ ಹಿರೇಮಠ ಕೊಲೆಗೆ ವ್ಯಾಪಕ ಖಂಡನೆ ವ್ಯಕ್ತವಾಗುತ್ತಿದೆ.
ಸೋಮವಾರದಂದು ಬೆಳಿಗ್ಗೆ 10 ರಿಂದ ಮಧ್ಯಾಹ್ನ 3 ರ ವರೆಗೆ ಮುಸ್ಲಿಮ್ ಸಮುದಾಯದವರು ವ್ಯಾಪಾರ ಸ್ಥಗಿತಗೂಳಿಸಲಿದ್ದು, ಧಾರವಾಡ ಅಂಜುಮನ್ ಇಸ್ಲಾಮ್ ಕರೆ ನೀಡಿರುವ ಬೃಹತ್ ಮೌನ ಮೆರವಣಿಗೆಯಲ್ಲಿ ಭಾಗವಹಿಸಲಿದ್ದಾರೆ.
ನೇಹಾ ಹಿರೇಮಠಳಿಗೆ ನ್ಯಾಯ ಸಿಗಬೇಕು ಎಂಬ ನಿಟ್ಟಿನಲ್ಲಿ ಹುಬ್ಬಳ್ಳಿಯ ನೂರಾನಿ ಮಾರ್ಕೆಟ್ ಬಂದ ಮಾಡಲು ವ್ಯಾಪಾರಸ್ಥರು ನಿರ್ಧರಿಸಿದ್ದಾರೆ. ಬೆಳಿಗ್ಗೆ 8 ಘಂಟೆಯಿಂದ ಮಧ್ಯಾಹ್ನ 3 ರ ವರೆಗೆ ವ್ಯಾಪಾರ ವಹಿವಾಟು ಬಂದ ಮಾಡಿ, ನೇಹಾ ಹಿರೇಮಠಗೆ ಶೃದ್ದಾಂಜಲಿ ಸಲ್ಲಿಸಲಿದ್ದಾರೆ.