ಹುಬ್ಬಳ್ಳಿಯ ಪ್ರತಿಷ್ಠಿತ ಬಿವ್ಹಿಬಿ ಕಾಲೇಜಿನ ಆವರಣದಲ್ಲಿ ಭೀಕರವಾಗಿ ಹತ್ಯೆಯಾದ ಕುಮಾರಿ ನೇಹಾ ಹಿರೇಮಠ ಸಾವಿಗೆ ನ್ಯಾಯ ಕೊಡಿಸಲು ಧಾರವಾಡದ ಅಂಜುಮನ್ ಇಸ್ಲಾಂ ಸಂಸ್ಥೆ ಕರೆ ನೀಡಿದ್ದ ಹುಬ್ಬಳ್ಳಿ-ಧಾರವಾಡ ಬಂದ್ ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಮುಂಜಾನೆಯಿಂದಲೇ ಮುಸ್ಲಿಮ್ ಸಮಾಜದ ಎಲ್ಲ ಅಂಗಡಿ ಮುಗ್ಗಟ್ಟುಗಳನ್ನು ಬಂದ ಮಾಡಲಾಗಿದೆ ಅಂಗಡಿಯ ಬಾಗಿಲಿಗೆ ನೇಹಾ ಹಿರೇಮಠ ಭಾವಚಿತ್ರ ಹಾಕಿ ನೇಹಾ ಹಿರೇಮಠಗೆ ನ್ಯಾಯ ಸಿಗಲಿ ಎಂದು ಎಂದು ಒಟ್ಟಾಯಿಸಿದ್ದಾರೆ. ಮುಸ್ಲಿಮ್ ಸಮಾಜದ ಅಂಗಡಿಗಳು ಇಂದು ಮಧ್ಯಾಹ್ನ 3 ಘಂಟೆಯವರೆಗೆ ಬಂದ ಆಗಲಿವೆ.