ಚುನಾವಣೆ ಪ್ರಚಾರದಲ್ಲಿರುವ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಕೊರಳಿಗೆ ವಿಶಿಷ್ಟ ಮಾಲೆ ಹಾಕಲಾಯಿತು. ಅರಸೀಕೆರೆಯ ಕಾನೂನು ವಿಧ್ಯಾರ್ಥನಿ ಸಿದ್ದರಾಮಯ್ಯನವರಿಗೆ ಉಚಿತ ಬಸ್ಸಿನ ಟಿಕೇಟ್ ನ ಮಾಲೆ ಹಾಕಿ ಧನ್ಯವಾದ ಸಮರ್ಪಿಸಿದಳು.
ರಾಜ್ಯ ಕಾಂಗ್ರೇಸ್ ಸರ್ಕಾರದ, ಉಚಿತ ಬಸ್ಸಿನ ಪ್ರಯಾಣದಿಂದ ಬಡತನದ ಕರಿನೆರಳಲ್ಲಿ ಬದುಕು ಕಟ್ಟಿಕೊಂಡಿದ್ದ ನನಗೆ ಕಾನೂನು ವ್ಯಾಸಂಗ ಮಾಡುವಂತಾಯಿತು ಎಂದು ಕೃತಜ್ಞತೆ ಸಲ್ಲಿಸಿದಳು.
ಉಚಿತ ಪ್ರಯಾಣದ ಸಂದರ್ಭದಲ್ಲಿ ತೆಗೆದಿಟ್ಟಿದ್ದ ಟಿಕೇಟಗಳನ್ನು ಸಂಗ್ರಹಿಸಿಟ್ಟಿದ್ದ ಆ ವಿಧ್ಯಾರ್ಥಿನಿ, ಮುಖ್ಯಮಂತ್ರಿಗಳು ಅರಿಸೀಕೆರೆಗೆ ಬರುವ ಸುದ್ದಿ ತಿಳಿದು, ಟಿಕೇಟಗಳನ್ನು ಮಾಲೆ ರೂಪದಲ್ಲಿ ತಂದು ಮಾಲೆ ಹಾಕಿದ್ದು ಗಮನ ಸೆಳೆಯಿತು.