ಹುಬ್ಬಳ್ಳಿಗೆ ಬಂದಿಳಿದಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ತಡಸದತ್ತ ಪ್ರಯಾಣ ಬೆಳೆಸಿದ್ದಾರೆ. ಧಾರವಾಡ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ವಿನೋದ ಅಸೂಟಿ ಪರ ಚುನಾವಣಾ ಪ್ರಚಾರದ ಬಹಿರಂಗ ಸಭೆಯಲ್ಲಿ ಭಾಗವಹಿಸಲಿರುವ ಮುಖ್ಯಮಂತ್ರಿಗಳು ಸಂಜೆ ಮತ್ತೆ ಹುಬ್ಬಳ್ಳಿಯ ಅಂಬೇಡ್ಕರ ಮೈದಾನದಲ್ಲಿ ನಡೆಯಲಿರುವ ಬಹಿರಂಗ ಸಭೆಯಲ್ಲಿ ಭಾಗವಹಿಸಲಿದ್ದಾರೆ.
ಹುಬ್ಬಳ್ಳಿಗೆ ತಡವಾಗಿ ಆಗಮಿಸಿರುವ ಮುಖ್ಯಮಂತ್ರಿಗಳು ನೇಹಾ ಹಿರೇಮಠ ಮನೆಗೆ ಸಂಜೆ ಭೇಟಿ ಕೊಡಲಿದ್ದಾರೆ. ಕಾರ್ಯಕ್ರಮ ತಡವಾದ ಪರಿಣಾಮ ಸಿದ್ದರಾಮಯ್ಯ ನೇರವಾಗಿ ತಡಸದತ್ತ ತೆರಳಿದ್ದಾರೆ.