ರಾಜ್ಯದ ಗಮನ ಸೆಳೆದಿರುವ ಧಾರವಾಡ ಲೋಕಸಭಾ ಕ್ಷೇತ್ರದ ಚುನಾವಣೆ ರಂಗೇರಿದೆ. ತಡಸ ಕ್ರಾಸ್ ಬಳಿ ಕಾಂಗ್ರೇಸ್ಸಿನ ಬಹಿರಂಗ ಚುನಾವಣೆ ಸಭೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲನೆ ನೀಡಿದ್ದಾರೆ. ಧಾರವಾಡ ಗ್ರಾಮೀಣ ಶಾಸಕ ವಿನಯ ಕುಲಕರ್ಣಿ ಸಮಾರಂಭದಲ್ಲಿ ಭಾಗವಹಿಸಿದ್ದು, ಬಿಜೆಪಿ ಅಭ್ಯರ್ಥಿ ಪ್ರಲ್ಲಾದ ಜೋಶಿ ವಿರುದ್ಧ ವಾಕ್ಸಮರ ನಡೆಸಿದ್ರು.
ಕ್ಷೇತ್ರದಲ್ಲಿ ಅಭಿವೃದ್ಧಿ ಕೆಲಸಗಳಿಗಿಂತ ಜೋಶಿಯವರು, ದ್ವೇಷದ ರಾಜಕಾರಣ ಮಾಡುತ್ತಾ ಬಂದಿದ್ದಾರೆ ಎಂದು ವಿನಯ ಕುಲಕರ್ಣಿ, ಆರೋಪಿಸಿದ್ರು. ನಾನು ಸಹ ಅವರ ವಿರುದ್ಧ ಎರಡು ಸಲ ಸೋತಿದ್ದೇನೆ, ಆದ್ರೆ ಸತ್ತಿಲ್ಲ, ನನಗೆ ಜೋಶಿಯವರು ನೀಡಿದ ಕಷ್ಟ ಯಾರಿಗೂ ಬರಬಾರದು ಎಂದ ವಿನಯ, ಲಿಂಗಾಯತರನ್ನು ರಾಜಕೀಯವಾಗಿ ಮುಗಿಸುವ ಕೆಲಸ ಮಾಡಿದ್ದಾರೆ ಎಂದು ಆರೋಪಿಸಿದ್ರು.
ನನಗೆ ನಾಲ್ಕು ವರ್ಷಗಳಿಂದ ಧಾರವಾಡ ಜಿಲ್ಲೆಗೆ ಪ್ರವೇಶ ಮಾಡದ ಹಾಗೆ ನೋಡಿಕೊಂಡಿದ್ದಾರೆ. ಹೀಗಾಗಿ ನಾನು ಜಿಲ್ಲೆಯ ಹೊರಗೆ ಬಂದು ಪ್ರಚಾರ ಮಾಡಬೇಕಾಗಿ ಬಂದಿದೆ ಎಂದು ಅಸಮಾಧಾನ ಹೊರಹಾಕಿದ್ರು. ಇವತ್ತಿನಿಂದ ಪ್ರತಿಯೊಬ್ಬ ಕಾರ್ಯಕರ್ತರು ಬೂತ್ ಮಟ್ಟದಲ್ಲಿ ಓಡಾಡಿ ವಿನೋದ ಅಸೂಟಿ ಪರ ಕೆಲಸ ಮಾಡಬೇಕು. ಲಿಂಗಾಯತರು ಜಾತಿ ನೋಡದೆ ಕಾಂಗ್ರೇಸ್ ಅಭ್ಯರ್ಥಿ ಪರ ಮತ ಹಾಕಬೇಕೆಂದು ಮನವಿ ಮಾಡಿದರು