ಧಾರವಾಡ ಲೋಕಸಭಾ ಕ್ಷೇತ್ರದ ಕಾಂಗ್ರೇಸ್ ಅಭ್ಯರ್ಥಿ ವಿನೋದ ಅಸೂಟಿ ಇಂದು ಕೂಡಲಸಂಗಮ ಪಂಚಮಸಾಲಿ ಪೀಠದ ಜಯ ಮೃತ್ಯುಂಜಯ ಸ್ವಾಮಿಗಳನ್ನು ಭೇಟಿ ಮಾಡಿ ಆಶೀರ್ವಾದ ಪಡೆದರು.
ಕುಂದಗೋಳ ತಾಲೂಕಿನ ಅಗಡಿಯಲ್ಲಿ ಭಕ್ತರ ಮನೆಗೆ ಬಂದಿದ್ದ ಜಯ ಮೃತ್ಯುಂಜಯ ಸ್ವಾಮೀಜಿ, ವಿನೋದ ಅಸೂಟಿಗೆ ಆಶೀರ್ವದಿಸಿದರು.
ಲೋಕಸಭಾ ಚುನಾವಣೆಯಲ್ಲಿ ನಿಮ್ಮ ಆಶೀರ್ವಾದ ಬೇಕು ಎಂದ ವಿನೋದಗೆ ಬೆನ್ನು ತಟ್ಟಿದ ಪಂಚಮಸಾಲಿ ಶ್ರೀಗಳು, ಶುಭ ಸೂಚನೆ ಕೊಟ್ಟಿದ್ದಾರೆ.
ನಿನ್ನೆಯಷ್ಟೇ ತಡಸ ಹೊರವಲಯದಲ್ಲಿ ನಡೆದಿದ್ದ ಕಾಂಗ್ರೇಸ್ ಬಹಿರಂಗ ಸಭೆಯಲ್ಲಿ ಲಿಂಗಾಯತರನ್ನು ಉದ್ದೇಶಿಸಿ ಮಾತನಾಡಿದ್ದ ವಿನಯ ಕುಲಕರ್ಣಿ ಹೇಳಿಕೆ ಬೆನ್ನಲ್ಲೇ ಶ್ರೀಗಳ ಈ ಭೇಟಿ ಮಹತ್ವ ಪಡೆದುಕೊಂಡಿದೆ