ಧಾರವಾಡ ಲೋಕಸಭಾ ಕ್ಷೇತ್ರ ದಿನದಿಂದ ದಿನಕ್ಕೆ ರಂಗೇರುತ್ತಿದೆ. ಸರಳ ವ್ಯಕ್ತಿತ್ವದಿಂದ ಜನರ ಮನಸ್ಸು ಗೆಲ್ಲುತ್ತಿರುವ ಕಾಂಗ್ರೇಸ್ ಅಭ್ಯರ್ಥಿ ವಿನೋದ ಅಸೂಟಿಯವರಿಗೆ ಭಾರಿ ಬೆಂಬಲ ವ್ಯಕ್ತವಾಗುತ್ತಿದೆ.
ನರಗುಂದದಲ್ಲಿ ಮಾಜಿ ಸಚಿವ ವಿನಯ ಕುಲಕರ್ಣಿ ನೇತ್ರತ್ವದಲ್ಲಿ ಸಭೆ ನಡೆಸಿದ ನವಲಗುಂದ ಕ್ಷೇತ್ರದ ಲಿಂಗಾಯತ ಸಮಾಜದ ಪ್ರಮುಖರು, ವಿನೋದ ಅಸೂಟಿ ಯವರನ್ನು ಗೆಲ್ಲಿಸಿಕೊಂಡು ಬರುವದಾಗಿ ಪ್ರತಿಜ್ಞೆ ಮಾಡಿದರು.
ವಿನೋದ ಅಸೂಟಿ, ಅತ್ಯಂತ ಸೌಮ್ಯ ಸ್ವಭಾವ ಹೊಂದಿದ್ದು, ಎಲ್ಲ ವರ್ಗದವರೊಡನೆ ಉತ್ತಮ ಬಾಂದವ್ಯ ಹೊಂದಿದ್ದಾರೆ. ವಿನೋದ ನಮ್ಮ ಸಮಾಜಕ್ಕೆ ಮನೆ ಮಗನಿದ್ದಂತೆ ಅವರ ಗೆಲುವು ನಮ್ಮೆಲ್ಲರ ಜವಾಬ್ದಾರಿ ಆಗಿದೆ, ನಾವೇ ಚುನಾವಣೆಗೆ ನಿಂತಿದ್ದೇವೆ ಎಂದು ತಿಳಿದು, ಹೆಚ್ಚಿನ ಸಂಖ್ಯೆಯಲ್ಲಿ ಮತ ಚಲಾಯಿಸುವಂತೆ ನೋಡಿಕೊಳ್ಳಬೇಕೆಂದು ಮಾಜಿ ಸಚಿವ ಹಾಗೂ ಹಾಲಿ ಶಾಸಕ ವಿನಯ ಕುಲಕರ್ಣಿ ತಿಳಿಸಿದರು.
ಸಭೆಯನ್ನು ಉದ್ದೇಶಿಸಿ ಮತಯಾಚಿಸಿದ ವಿನೋದ ಅಸೂಟಿ, ಲಿಂಗಾಯತ ಸಮಾಜ ನನಗೆ ಆಶೀರ್ವಾದ ಮಾಡಬೇಕು ಎಂದರಲ್ಲದೆ, ನನ್ನನ್ನು ನಿಮ್ಮ ಮನೆ ಮಗ ಎಂದು ತಿಳಿದು, ನನಗೆ ನಿಮ್ಮ ಹೃದಯದಲ್ಲಿ ಶಾಶ್ವತ ಸ್ಥಾನ ನೀಡಬೇಕೆಂದು ಪ್ರಾರ್ಥಿಸಿದರು.
ಸಭೆಯಲ್ಲಿ ಕರ್ನಾಟಕ ಪ್ರದೇಶ ಕಾಂಗ್ರೇಸ್ ಸಮಿತಿ ಉಪಾಧ್ಯಕ್ಷರಾದ, ಮಾಜಿ ವಿಧಾನ ಪರಿಷತ್ ಸದಸ್ಯ ಮೋಹನ ಲಿಂಬಿಕಾಯಿ, ಸಹಕಾರಿ ಯೂನಿಯನ್ ಮುಖಂಡ ಬಾಪುಗೌಡ ಪಾಟೀಲ, ಡಾ. ಸಂಗಮೇಶ ಕೊಳ್ಳಿ, ಪ್ರವೀಣ ಯಾವಗಲ್, ಸದುಗೌಡ ಪಾಟೀಲ, ಆರ್ ಎಚ್ ಕೋನರೆಡ್ಡಿ, ನೀಲಕಂಠ ಅಸೂಟಿ, ವರ್ಧಮಾನ ಹಿರೇಗೌಡರ, ಶಿವಾನಂದ ಮುತ್ತಣ್ಣವರ, ಶಿವಾನಂದ ಬೂಮಣ್ಣವರ, ಸೇರಿದಂತೆ ನವಲಗುಂದ ತಾಲೂಕಿನ ವೀರಶೈವ ಲಿಂಗಾಯತ ಸಮಾಜದ ಮುಖಂಡರು ಭಾಗವಹಿಸಿದ್ದರು.