ನವಲಗುಂದ ವಿಧಾನಸಭಾ ಮತಕ್ಷೇತ್ರದಲ್ಲಿ ಕಾಂಗ್ರೇಸ್ ಪಕ್ಷದ ನಾಯಕರು ಲೋಕಸಭಾ ಚುನಾವಣೆಯನ್ನು ಗಂಭೀರವಾಗಿ ತೆಗೆದುಕೊಂಡಿದ್ದಾರೆ. ಪಕ್ಷಡ ನಾಯಕರು, ಕಾರ್ಯಕರ್ತರ ಜೊತೆ ಬೂತ್ ಮಟ್ಟದಲ್ಲಿ ಮನೆ ಮನೆಗೆ ಹೋಗುತ್ತಿದ್ದು, ಪಕ್ಷದ ಪ್ರಣಾಳಿಕೆ ಗ್ಯಾರಂಟಿ ಪತ್ರ ನೀಡುತ್ತಿದ್ದಾರೆ.
ಮೊರಬ ಜಿಲ್ಲಾ ಪಂಚಾಯತ್ ಕ್ಷೇತ್ರದಲ್ಲಿ ಪಕ್ಷದ ನಾಯಕರಾದ, ರವಿ ಕಗದಾಳ, ಮಹಾಂತೇಶ ಹಂಚಿನಾಳ, ಜಾವಿದ್ ಜಹಾಗಿರ್ದಾರ, ಜಗದೀಶ್ ಕರಿಸಿರಿ, ಅಶೋಕ್ ಕಿತ್ತೂರ್, ಅಫ್ಜಲ್ ಬಡೆಮಿಯಾ, ನಾಗಪ್ಪ ಉಪಾರಟ್ಟಿ, ಶಂಕ್ರಪ್ಪ ಕವಳಿಕಾಯಿ ಸೇರಿದಂತೆ ಅನೇಕ ನಾಯಕರು ಮನೆ ಮನೆಗೆ ತೆರಳಿ ಪಕ್ಷದ ಕಾರ್ಯಕ್ರಮದ ಬಗ್ಗೆ ಹೇಳುತ್ತಿದ್ದಾರೆ