ಲೋಕಸಭಾ ಚುನಾವಣೆಯ ಮತದಾನ ಹತ್ತಿರವಾಗುತ್ತಿದ್ದಂತೆ ನವಲಗುಂದದಲ್ಲಿ ಕಾಂಗ್ರೇಸ್ ಕಾರ್ಯಕರ್ತರು ಮೈ ಕೊಡವಿಕೊಂಡು ಮೈದಾನಕ್ಕೆ ಇಳಿದಿದ್ದಾರೆ. ಮನೆ ಮನೆಗೆ ತೆರಳಿ ಕಾಂಗ್ರೇಸ್ ಪಕ್ಷದ ಗ್ಯಾರಂಟಿ ಪತ್ರ ನೀಡಿ, ಮತ ಭೇಟೆಯಲ್ಲಿ ತೊಡಗಿದ್ದಾರೆ.
ನವಲಗುಂದದ 23 ವಾರ್ಡಗಳಲ್ಲಿ ಸಂಚರಿಸುತ್ತಿರುವ ಕಾಂಗ್ರೇಸ್ ಕಾರ್ಯಕರ್ತರು ವಿನೋದ ಅಸೂಟಿ ಪರ ಪ್ರಚಾರದಲ್ಲಿ ತೊಡಗಿದ್ದಾರೆ
ಮಾಜಿ ಪುರಸಭಾ ಅಧ್ಯಕ್ಷ ಅಪ್ಪಣ್ಣ ಹಳ್ಳದ, ಮೋದಿನ ಶಿರೂರ, ಸೈಫುದ್ದಿನ ಅವರಾದಿ, ಬಾಬರ ದಫೇದಾರ, ಮೋದಿನ ಸೇರಿದಂತೆ ಅನೇಕರು ಮತದಾರರನ್ನು ಭೇಟಿ ಮಾಡುತ್ತಿದ್ದಾರೆ.