ಸರಳತೆ, ಸಜ್ಜನಿಕೆಯನ್ನು ಮೈಗೂಡಿಸಿಕೊಂಡಿದ್ದ ಪ್ರಾಮಾಣಿಕ ರಾಜಕಾರಣಿ ಹಾಗೂ ಕೇಂದ್ರದ ಮಾಜಿ ಸಚಿವ, ವಿ. ಶ್ರೀನಿವಾಸ ಪ್ರಸಾದ ವಿಧಿವಶರಾಗಿದ್ದಾರೆ.
ತಮ್ಮ ಜೀವಿತಾವಧಿಯಲ್ಲಿ 14 ಚುನಾವಣೆಗಳನ್ನು ಎದುರಿಸಿದ್ದ ವಿ ಶ್ರೀನಿವಾಸ ಪ್ರಸಾದ ಅವರು, ರಾಜಕೀಯ ಜೀವನದಲ್ಲಿ ಮಾದರಿಯಾಗಿದ್ದರು. ಆರು ಸಲ ಸಂಸದರಾಗಿ, ಎರಡು ಸಲ ಶಾಸಕರಾಗಿ ಅನನ್ಯ ಸೇವೆ ಸಲ್ಲಿಸಿದ್ದ ಶ್ರೀ ಪ್ರಸಾದ್, 27 ವರ್ಷಗಳ ಸುದೀರ್ಘ ಕಾಲ ಸಂಸತ್ ಸದಸ್ಯರಾಗಿದ್ದರು.
ಅತ್ಯಂತ ಹಿರಿಯರಾಗಿದ್ದ ಶ್ರೀನಿವಾಸ ಪ್ರಸಾದ, 7 ಪ್ರಧಾನಿಗಳನ್ನು ಕಂಡಿದ್ದರು. ಅವರ ನಿಧನಕೆ ನಾಡಿನ ರಾಜಕಾರಣಿಗಳು ಕಂಬನಿ ಮಿಡಿದಿದ್ದಾರೆ.