ಧಾರವಾಡ ಲೋಕಸಭಾ ವ್ಯಾಪ್ತಿಯ ಕುಂದಗೋಳದಲ್ಲಿಂದು ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ ಕಾಂಗ್ರೇಸ್ ಅಭ್ಯರ್ಥಿ ವಿನೋದ ಅಸೂಟಿ ಪರ ಮತಯಾಚನೆ ಮಾಡಿದರು.
ಮಾತಿನದ್ದಕ್ಕೂ ಬಿಜೆಪಿ ಅಭ್ಯರ್ಥಿ ಪ್ರಲ್ಲಾದ ಜೋಶಿ ಮೇಲೆ ವಾಗ್ದಾಳಿ ನಡೆಸಿದ ಡಿ ಕೆ, ಕಳೆದ 20 ವರ್ಷಗಳ ಅವಧಿಯಲ್ಲಿ ಜೋಶಿ ಮಾಡಿದ್ದೇನು ಎಂದು ಪ್ರಶ್ನಿಸಿದ್ರು. ಕಳಸಾ ಬಂಡೋರಿ, ಮಹಾದಾಯಿ ಯೋಜನೆ ಅನುಷ್ಟಾನದಲ್ಲಿ ಜೋಶಿ ವಿಫಲರಾಗಿದ್ದು, ರಾಜ್ಯ ಕಾಂಗ್ರೇಸ್ ಸರ್ಕಾರ ಕೊಟ್ಟ ಮಾತಿನಂತೆ ನಡೆದುಕೊಂಡಿದೆ ಎಂದು ಹೇಳಿದರು.
ಜೋಶಿಯವರನ್ನು ಈ ಸಲ ಮನೆಗೆ ಕಳಿಸುವ ಕೆಲಸ ಮಾಡಬೇಕೆಂದ ಡಿ ಕೆ ಶಿವಕುಮಾರ, ವಿನೋದ ಅಸೂಟಿಗೆ ಗೆಲ್ಲಿಸಬೇಕೆಂದು ಮನವಿ ಮಾಡಿದರು.