ಹುಬ್ಬಳ್ಳಿಯ ವಿಧ್ಯಾನಗರದಲ್ಲಿರುವ ರಂಭಾಪುರಿ ಕಲ್ಯಾಣ ಮಂಟಪದಲ್ಲಿ ಫಕೀರ ದಿಂಗಾಲೇಶ್ವರ ಶ್ರೀಗಳ ನೇತೃತ್ವದಲ್ಲಿ ನಡೆಯುತ್ತಿದ್ದ ಸ್ವಾಮೀಜಿಗಳಿಗೆ ಅಡ್ಡಿ ಪಡಿಸಿದ ಘಟನೆ ನಡೆದಿದೆ.
ಚುನಾವಣಾ ನೀತಿ ಸಂಹಿತೆ ಜಾರಿ ಇರುವಾಗ ಸಭೆ ನಡೆಸಲು ಪರವಾನಿಗೆ ಅಗತ್ಯ. ಇದು ನೀತಿ ಸಂಹಿತೆ ಉಲ್ಲಂಘನೆಯಾಗಿದೆ ಎಂದು ಹೇಳಿ ವಿಧ್ಯಾನಗರ ಪೊಲೀಸ ಇನ್ಸಪೆಕ್ಟರ್ ಸಭೆ ಮಾಡದಂತೆ ಹೇಳಿದ್ದಾರೆ.
ನಾವು ನಾಡಿನ ಸ್ವಾಮೀಜಿಗಳ ಧಾರ್ಮಿಕ ಸಭೆ ನಡೆಸುತ್ತಿದ್ದೇವೆ. ಧಾರ್ಮಿಕ ಸಭೆ ನಡೆಸಲು ಅನುಮತಿ ಅವಶ್ಯಕತೆ ಇದೆಯಾ ಎಂದು ದಿಂಗಾಲೇಶ್ವರ ಶ್ರೀಗಳು ಆಕ್ಷೇಪ ಮಾಡಿದರು.
ಇಷ್ಟಕ್ಕೆ ಸುಮ್ಮನಾಗದ ಅಧಿಕಾರಿಗಳು, ಕಡೆಗೂ ಸ್ವಾಮೀಜಿಗಳು ನಡೆಸುತ್ತಿದ್ದ ಸಭೆ ಬಂದ ಮಾಡಿಸಿದ್ರು. ಇದರಿಂದ ಆಕ್ರೋಶಗೊಂಡ ಸ್ವಾಮೀಜಿಗಳು ದಿಂಗಾಲೇಶ್ವರ ಸ್ವಾಮಿಗಳ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿ, ವಿದ್ಯಾನಗರ ಇನ್ಸಪೆಕ್ಟರ ಅಮಾನತ್ತು ಮಾಡುವಂತೆ ಆಗ್ರಹಿಸಿದ್ರು.
ಸ್ವಾಮೀಜಿಗಳ ಪ್ರತಿಭಟನೆ ತೀವ್ರ ಸ್ವರೂಪ ಪಡೆಯುತ್ತಿದ್ದಂತೆ ಮಧ್ಯ ಪ್ರವೇಶಿಸಿದ ಡಿ ಸಿ ಪಿ ರಾಜೀವ್ ಪರಿಸ್ಥಿತಿ ತಿಳಿಗೊಳಿಸಿ, ನಡೆದ ಘಟನೆಗೆ ವಿಷಾಧ ವ್ಯಕ್ತಪಡಿಸಿದ್ರು.