ಅತ್ಯಾಚಾರಕ್ಕೊಳಗಾದ ಸಂತ್ರಸ್ತೆಯ ಅಪಹರಣ ಆರೋಪದ ಮೇಲೆ ಎಸ್ ಐ ಟಿ ಅಧಿಕಾರಿಗಳು ಮಾಜಿ ಸಚಿವ ಎಚ್ ಡಿ ರೇವಣ್ಣ ಅವರನ್ನು ಬಂಧಿಸಿದ್ದಾರೆ.
ಅಪಹರಣ ಪ್ರಕರಣಕ್ಕೆ ಸಂಬಂಧಿಸಿದಂತೆ ತಮ್ಮ ಮೇಲೆ ಕೇಸ್ ಧಾಖಲು ಆಗುತ್ತಿದ್ದಂತೆ ಎಚ್ ಡಿ ರೇವಣ್ಣ ನ್ಯಾಯಾಲಯದಲ್ಲಿ ನಿರೀಕ್ಷಣಾ ಜಾಮೀನು ಅರ್ಜಿ ಸಲ್ಲಿಸಿದ್ದರು. ನಿರೀಕ್ಷಣಾ ಜಾಮೀನು ಅರ್ಜಿ ತಿರಸ್ಕಾರವಾಗುತ್ತಿದ್ದಂತೆ ದೇವೇಗೌಡರ ಮನೆಗೆ ಬಂದ ಎಸ್ ಐ ಟಿ ಅಧಿಕಾರಿಗಳು ರೇವಣ್ಣ ಅವರನ್ನು ಬಂದಿಸಿದ್ದಾರೆ.
ಅತ್ಯಾಚಾರಕ್ಕೆ ಒಳಗಾದ ಸಂತ್ರಸ್ತೆಯನ್ನು ಎಪ್ರಿಲ್ 29 ರಂದು ಅಪಹರಣ ಮಾಡಲಾಗಿತ್ತು ಎಂಬ ಆರೋಪ ರೇವಣ್ಣನವರ ಮೇಲಿದೆ. ಅಲ್ಲದೆ ಸಂತ್ರಸ್ತೆಯನ್ನು ರೇವಣ್ಣ ಅಪ್ತ ರಾಜಗೋಪಾಲನ ತೋಟದ ಮನೆಯಿಂದ ಪೊಲೀಸರು ರಕ್ಷಣೆ ಮಾಡಿದ್ದರು.