ಧಾರವಾಡ ತಾಲೂಕಿನ ತಡಕೋಡ ಗ್ರಾಮದಲ್ಲಿ ನಿಂಗಪ್ಪ ಹಾದಿಮನಿ ಎಂಬ ಬಿಜೆಪಿ ಕಾರ್ಯಕರ್ತ, ವೋಟ ಹಾಕಲು ಮನೆ ಮನೆಗೆ ಹಣ ಹಂಚುತ್ತಿರುವ ದೃಶ್ಯವನ್ನು ಕಾಂಗ್ರೇಸ್ ಕಾರ್ಯಕರ್ತರು ಸೆರೆ ಹಿಡಿದಿದ್ದಾರೆ.
ತಡಕೋಡ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಬಿಜೆಪಿ ಅಭ್ಯರ್ಥಿ ಪ್ರಲ್ಲಾದ ಜೋಶಿಯವರ ಪರ ಮತ ಚಲಾಯಿಸುವಂತೆ ಹಣದ ಆಮಿಷ ಒಡ್ದುತ್ತಿದ್ದ ಎನ್ನಲಾಗಿದೆ.
ಮನೆ ಮನೆಗೆ ಹೋಗಿ ಹಣ ಹಂಚುತ್ತಿದ್ದಾಗ ಆಕ್ಷೇಪ ವ್ಯಕ್ತಪಡಿಸಿದ ಕಾಂಗ್ರೇಸ್ ಕಾರ್ಯಕರ್ತರು, ಮೊಬೈಲ್ ನಲ್ಲಿ ಹಣ ಹಂಚುತ್ತಿರುವ ದೃಶ್ಯ ಸೆರೆ ಹಿಡಿದು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ ಎನ್ನಲಾಗಿದೆ. ಈ ಕುರಿತಂತೆ ಕ್ರಮ ಕೈಗೊಂಡ ಬಗ್ಗೆ ಗರಗ ಠಾಣೆ ಪೊಲೀಸರು ಇನ್ನಷ್ಟೇ ಮಾಹಿತಿ ನೀಡಬೇಕಾಗಿದೆ.