ಧಾರವಾಡ ಲೋಕಸಭಾ ಕ್ಷೇತ್ರ, ಹಿಂದೆಂದಿಗಿಂತ ಈ ಸಲ ಜೋರು ಸದ್ದು ಮಾಡಿತ್ತು. ಎರಡು ರಾಷ್ಟ್ರೀಯ ಪಕ್ಷಗಳ ಅಭ್ಯರ್ಥಿಗಳು, ಹಳ್ಳಿ ಹಳ್ಳಿಗಳ ದರ್ಶನ ಪಡೆದಿದ್ರು.
ಬಿಸಿಲಿನ ಧಗೆಯಲ್ಲೂ ಬೆವರಿಳಿಸಿಕೊಂಡು ಪ್ರಚಾರ ಕಾರ್ಯದಲ್ಲಿ ಧುಮುಕಿದ್ದರು. ಇದೇ ಮೊದಲ ಬಾರಿಗೆ, ಜನರನ್ನು ಹತ್ತಿರದಿಂದ ಮಾತಾಡಿಸಿಕೊಂಡು ಬರುವಷ್ಟು ಬಿರುಸಿನಿಂದ ಕೂಡಿದ್ದ ಚುನಾವಣೆ ಗಮನ ಸೆಳೆದಿತ್ತು.
ಮತದಾನ ಮುಗಿದು 48 ಘಂಟೆ ಮುಗಿದಿದೆ. ಎಲ್ಲೆಲ್ಲಿ ಎಷ್ಟೇಷ್ಟು ಮತದಾನ ಆಗಿದೆ, ಯಾರಿಗೆ ಎಷ್ಟು ಮತ ಬೀಳುತ್ತವೆ ಅನ್ನೋ ಲೆಕ್ಕ ನಡೆದಿದೆ. ” ಆ ಊರಲ್ಲಿ ಆ ಪಾರ್ಟಿ ಜೋರ್ ಐತಂತ ” ” ಈ ಕಡೆ ಆ ಪಾರ್ಟಿ ಜೋರ್ ಐತಂತ, ಗ್ಯಾರಂಟಿ ಹೊಡೆತ ಆಕ್ಕೆತಿ ನೋಡ್ತೀರ ಈ ಸಲ” ಎಂದು ಮಾತನಾಡಿಕೊಂಡು ಜನ ಕಟ್ಟೆ ಮೇಲೆ ಹರಟೆ ಹೊಡೆಯುತ್ತ ಲೆಕ್ಕ ಹಾಕುತ್ತಿದ್ದಾರೆ.
ಮತದಾನ ಪ್ರಕ್ರಿಯೆ ಮುಗಿದು, ಅಭ್ಯರ್ಥಿಗಳ ಭವಿಷ್ಯ ಮತಯಂತ್ರಗಳಲ್ಲಿ ಭದ್ರವಾಗಿದ್ದು, ಜೂನ್ 4 ರಂದು ಹಣೆಬರಹ ಗೊತ್ತಾಗಲಿದೆ.
ಕ್ಷೇತ್ರದಲ್ಲಿ ಕಾಲಿಗೆ ಚಕ್ರ ಕಟ್ಟಿಕೊಂಡು, ಓಡಾಡಿದ್ದ ಬಿಜೆಪಿ ಅಭ್ಯರ್ಥಿ ಪ್ರಲ್ಲಾದ ಜೋಶಿ, ಕಾಂಗ್ರೇಸ್ ಅಭ್ಯರ್ಥಿ ವಿನೋದ ಅಸೂಟಿ, ಕುಟುಂಬದವರೊಂದಿಗೆ ಕಾಲ ಕಳೆಯುತ್ತಿದ್ದಾರೆ.