ವಿವಾಹಿತ ವ್ಯಕ್ತಿಗೆ ಇಸ್ಲಾಂ ಧರ್ಮವು ಲಿವ್-ಇನ್ ಸಂಬಂಧವನ್ನು ಅನುಮತಿಸದ ಕಾರಣ ಮುಸ್ಲಿಮರು ಲಿವ್-ಇನ್ ಸಂಬಂಧದ ಹಕ್ಕುಗಳನ್ನು ಪಡೆಯಲು ಸಾಧ್ಯವಿಲ್ಲ ಎಂದು ಅಲಹಾಬಾದ್ ಹೈಕೋರ್ಟ್‌ನ ಲಕ್ನೋ ಪೀಠ ತೀರ್ಪು ಬುಧವಾರ ಮಹತ್ವದ ತೀರ್ಪು ನೀಡಿದೆ.
ಉತ್ತರ ಪ್ರದೇಶದ ಬಹ್ರೈಚ್ ಜಿಲ್ಲೆಯ ನಿವಾಸಿಗಳಾದ ಸ್ನೇಹಾ ದೇವಿ ಮತ್ತು ಮೊಹಮ್ಮದ್ ಶಾದಾಬ್ ಖಾನ್ ಎಂಬುವವರು ಲಿವ್ ಇನ್ ನಲ್ಲಿದ್ದರು. ಅಲ್ಲದೆ ತಮಗೆ ಸಂವಿಧಾನದ ಪರಿಚ್ಚೆದ 21 ( ಜೀವನ ಮತ್ತು ವೈಯುಕ್ತಿಕ ಸ್ವಾತಂತ್ರ್ಯದ ರಕ್ಷಣೆ ) ಅನ್ವಯ ರಕ್ಷಣೆ ಕೋರಿ ಮೆಟ್ಟಲೇರಿದ್ದರು.
ಇವರಿಬ್ಬರ ರಿಟ್ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಆರ್ ಮಸೂದಿ ಮತ್ತು ನ್ಯಾಯಮೂರ್ತಿ ಎಕೆ ಶ್ರೀವಾಸ್ತವ ಅವರ ಲಕ್ನೋ ಪೀಠ, ಇಬ್ಬರು ವಯಸ್ಕರಾಗಿದ್ದರಿಂದ ಸುಪ್ರೀಂ ಕೋರ್ಟ ನಿಗದಿಪಡಿಸಿದ ಮಾನದಂಡಗಳ ಪ್ರಕಾರ, ಲಿವ್ ಇನ್ ಸಂಬಂಧದಲ್ಲಿ ಒಟ್ಟಿಗೆ ವಾಸಿಸಲು ಸ್ವತಂತ್ರರು ಎಂದು ಹೇಳಿತ್ತು. ಅದಾಗಿಯೂ ವಿಚಾರಣೆ ನಂತರ ಪೀಠವು, ಈಗಾಗಲೇ ಶಾದಾಬಖಾನ ಮದುವೆಯಾಗಿದ್ದು, ಒಂದು ಮಗುವಿದೆ. ಹೀಗಿದ್ದಾಗ ಇಸ್ಲಾಮಿಕ್ ತತ್ವಗಳು ಆಸ್ತಿತ್ವದಲ್ಲಿರುವ (ಶರಿಯತ್) ವಿವಾಹದ ಸಂದರ್ಭದಲ್ಲಿ ಲಿವ್ ಇನ್ ಸಂಬಂದಗಳನ್ನು ಅನುಮತಿಸುವದಿಲ್ಲ ಎಂದು ಹೇಳಿ ತೀರ್ಪು ನೀಡಿದೆ.
ವಿಚಿತ್ರವೆಂದರೆ, ಅರ್ಜಿದಾರರು ತಾವು ಲಿವ್-ಇನ್ ಸಂಬಂಧದಲ್ಲಿದ್ದೇವೆ ಎಂದು ವಾದಿಸುತ್ತಾರೆ ಆದರೆ ಮಹಿಳೆಯ ಕುಟುಂಬವು ತಮ್ಮ ಮಗಳನ್ನು ಅಪಹರಿಸಿ ಮದುವೆಯಾಗಿದ್ದಾನೆ ಎಂದು ಆರೋಪಿಸಿ ಶಾದಾಬ್ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ.
ಸಧ್ಯ ಈ ಪ್ರಕರಣ ದೇಶದ ಗಮನ ಸೆಳೆದಿದ್ದು, ಲಖನೌ ಪೀಠ, ಶರಿಯತ್ ಕಾನೂನನ್ನು ವ್ಯಾಖ್ಯಾನಿಸಿದೆ.