ಹುಬ್ಬಳ್ಳಿ ಮಹಾನಗರ ಇಂದು ಮಳೆಗೆ ತತ್ತರಿಸಿಹೋಯ್ತು. ಸಂಜೆ ಸುರಿದ ಭಾರಿ ಮಳೆ ಹುಬ್ಬಳ್ಳಿಗರಲ್ಲಿ ಭಯ ಹುಟ್ಟಿಸಿತ್ತು. ಭಾರಿ ಗುಡುಗು, ಸಿಡಿಲಿನಿಂದ ಕೂಡಿದ ಮಳೆಗೆ ಬೃಹತ ಮರಗಳು ಧರಾಶಾಹಿಯಾದವು.
ಹುಬ್ಬಳ್ಳಿಯ ವಿನಯ ಕಾಲೋನಿಯ 6 ನೇ ಕ್ರಾಸ್ ನಲ್ಲಿ ಇದ್ದ ವಿದ್ಯುತ್ ಟ್ರಾನ್ಸ್ಫರ್ಮರ ಗೆ ಆಕಸ್ಮಿಕ ಬೆಂಕಿ ಹೊತ್ತಿಕೊಂಡಿತು. ಇದರಿಂದಾಗಿ ಅಲ್ಲೇ ಪಕ್ಕದಲ್ಲಿ ಇದ್ದವರು, ತಕ್ಷಣ ಅಲ್ಲಿಂದ ಕಾಲ್ಕಿತ್ತ ಘಟನೆ ನಡೆಯಿತು.
ಹುಬ್ಬಳ್ಳಿಯಲ್ಲಿ ಇಂದು ಸುರಿದ ಭಾರಿ ಮಳೆಗೆ ಹುಬ್ಬಳ್ಳಿಯ ಬಹುತೇಕ ರಸ್ತೆಗಳು ನೀರಿನಲ್ಲಿ ಮುಳುಗಿದ್ದವು.