ಹಿಂದೂಗಳಿಗಿಂತ ಮುಸ್ಲೀಮರ ಸಂಖ್ಯೆ ಹೆಚ್ಚಾಗಿದೆ ಎಂಬ ನೇರವಾದ ಸುಳ್ಳನ್ನು ಹರಿಯಬಿಡುವ ಮೂಲಕ ಬಿಜೆಪಿ ಮತ್ತು ಅದರ ಬೆಂಬಲಿತ ಮಾಧ್ಯಮಗಳು ಚುನಾವಣಾ ಕಾರಣಕ್ಕೆ ಜನರ ದಿಕ್ಕು ತಪ್ಪಿಸುತ್ತಿವೆ ಎಂದು ಸಮಾಜ ಕಲ್ಯಾಣ ಸಚಿವ ಎಚ್ ಸಿ ಮಹಾದೇವಪ್ಪ ಕಿಡಿ ಕಾರಿದ್ದಾರೆ.
“ಎಕ್ಸ್ ” ನಲ್ಲಿ ಬರೆದುಕೊಂಡಿರುವ ಮಹಾದೇವಪ್ಪ, S Y ಖುರೇಶಿಯವರ ಅಧ್ಯಯನದಂತೆ 2101 ರ ವೇಳೆಗೆ ಭಾರತದಲ್ಲಿ ಹಿಂದೂಗಳ ಸಂಖ್ಯೆ 127 ಕೋಟಿ ಇರಲಿದ್ದು ಮುಸ್ಲಿಂರು 32 ಕೋಟಿ ಇರಲಿದ್ದಾರೆ ಎಂದು ತಿಳಿಸಿದ್ದಾರೆ.
ಸೋಲಿನ ಭಯಕ್ಕೆ ಬಿದ್ದ ಮನುವಾದಿ ಪ್ರೇರಿತ ಮಾಧ್ಯಮಗಳು ತಮ್ಮ ಕಾರ್ಪೋರೇಟ ವಲಯಗಳು, ಚುನಾವಣಾ ಅನುಕೂಲಕ್ಕೆ ಪೂರಕವಾದ ಆಲೋಚನೆಯನ್ನು ಬಿತ್ತುತ್ತಿವೆ ಎಂದು ಆರೋಪಿಸಿದ್ದಾರೆ.
ಅನಗತ್ಯವಾಗಿ ಸುಳ್ಳು ಮತ್ತು ದ್ವೇಷ ಹರಡುವ ಕೆಲಸ ಮಾಡುವವರ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದು ಸಮಾಜ ಕಲ್ಯಾಣ ಸಚಿವ ಡಾ. ಎಚ್ ಸಿ ಮಹಾದೇವಪ್ಪ ಎಚ್ಚರಿಕೆ ನೀಡಿದ್ದಾರೆ.
