ಕನ್ನಡದ ಸುದ್ದಿ ವಾಹಿನಿ ಸುವರ್ಣ ನ್ಯೂಸ್, ಭಾರತೀಯ ಮುಸ್ಲಿಮರ ಸುದ್ದಿ ಬಿತ್ತರಿಸುವ ಸಮಯದಲ್ಲಿ ಎಡಬಿಡಂಗಿಯಾಗಿ ನಡೆದುಕೊಂಡಿದೆ.
ಪ್ರಧಾನಮಂತ್ರಿಗಳ ಆರ್ಥಿಕ ಸಲಹಾ ಮಂಡಳಿ ಬಿಡುಗಡೆ ಮಾಡಿರುವ ಜನಸಂಖ್ಯಾ ವರದಿ ಕುರಿತು ಸುದ್ದಿ ಮಾಡುವಾಗ ಸುವರ್ಣ ನ್ಯೂಸ್, ಒಂದು ಸಮುದಾಯದ ಆಕ್ರೋಶಕ್ಕೆ ಕಾರಣವಾಗಿದೆ.
ಹಿಂದುಗಳ ಜನಸಂಖ್ಯೆ ತಿಳಿಸಲು, ಭಾರತದ ದ್ವಜ, ಭಾರತೀಯ ಮುಸ್ಲಿಮರ ಜನಸಂಖ್ಯೆ ತಿಳಿಸಲು ಪಾಕ್ ದ್ವಜ ಬಳಸಿರುವದು ಮುಸ್ಲಿಮರ ಆಕ್ರೋಶಕ್ಕೆ ಕಾರಣವಾಗಿದೆ.
ದಿನ ಬೆಳಗಾದರೆ ಒಂದು ಸಮುದಾಯವನ್ನು ಗುರಿಯಾಗಿಸಿಕೊಂಡು ಸುದ್ದಿ ಬಿತ್ತರಿಸುತ್ತಿರುವ ಸುವರ್ಣ ನ್ಯೂಸ್ ಮೇಲೆ ದೂರು ಧಾಖಲಿಸಲು ಕೆಲ ಪ್ರಗತಿಪರ ಸಂಘಟನೆಗಳು ಮುಂದಾಗಿವೆ.