ಹುಬ್ಬಳ್ಳಿಯ ಬಿ ವಿ ಬಿ ಕಾಲೇಜಿನಲ್ಲಿ ನಡೆದಿದ್ದ ನೇಹಾ ಹಿರೇಮಠ ಕೊಲೆ ಮಾಸುವ ಮುನ್ನವೇ, ಹುಬ್ಬಳ್ಳಿಯಲ್ಲಿ ಇಂದು ಮತ್ತೆ ನೆತ್ತರು ಹರಿದಿದೆ.
ವಿರಾಪುರ ಓಣಿಯಲ್ಲಿ ಇರುವ ತನ್ನ ಅಜ್ಜಿಯ ಮನೆಯಲ್ಲಿ ಮಲಗಿದ್ದ, ಅಂಜಲಿ ಎಂಬಾಕೆಯನ್ನು ಹಿಂದು ಯುವಕನೊಬ್ಬ ಕೊಲೆ ಮಾಡಿ ಪರಾರಿಯಾಗಿದ್ದಾನೆ. ಹಂತಕನನ್ನು ಗಿರೀಶ್ ಎಂದು ಗುರುತಿಸಲಾಗಿದೆ.
ಅಂಜಲಿ, ಅನಾಥೆ, ತಂದೆ ತಾಯಿ ತೀರಿಕೊಂಡ ಬಳಿಕ ಅಕ್ಕ ಪಕ್ಕದ ಮನೆಯಲ್ಲಿ ಮನೆಗೆಲಸ ಮಾಡಿಕೊಂಡು ಬದುಕು ಕಟ್ಟಿಕೊಂಡಿದ್ದಳು. ಅಪ್ಪ ಅಮ್ಮ ಇಲ್ಲದೆ ಒಬ್ಬಂಟಿಯಾಗಿದ್ದ ಅಂಜಲಿ, ಅಜ್ಜಿಯ ಜೊತೆ ವಾಸವಾಗಿದ್ದಳು.
ಗಿರೀಶ ಎಂಬಾತ ಅಂಜಲಿ ಮೇಲೆ ಅದ್ಯಾವಾಗ ಕಣ್ಣು ಹಾಕಿದನೋ ಗೊತ್ತಿಲ್ಲ, ಮೈಸೂರಿಗೆ ಹೋಗೋಣ ಬಾ ಎಂದು ಹಿಂದೆ ಬಿದ್ದಿದಾನೆ. ಆಕೆ ಬರದೇ ಇದ್ದಾಗ, ಬೆದರಿಕೆ ಹಾಕಿದ್ದಾನೆ. ನಿನ್ನನ್ನು ನೇಹಾ ಹಿರೇಮಠ ಕೊಲೆ ಮಾಡಿದಂಗೆ ಮಾಡುತ್ತೇನೆ ಎಂದು ಜೀವ ಬೆದರಿಕೆ ಹಾಕಿದ್ದನಂತೆ. ಇದನ್ನು ಆಂಜಲಿಯ ಅಜ್ಜಿ ಪೊಲೀಸ್ ಗಮನಕ್ಕೆ ತಂದಿದ್ದರಂತೆ.
ಅನಾಥೆ ಅಂಜಲಿ ಮೇಲೆ ಮನಸೋ ಇಚ್ಛೆ ಕೊಚ್ಚಿ ಕೊಲೆ ಮಾಡಿರುವ ಗಿರೀಶ್ ನಿಗೆ ಗಲ್ಲು ಶಿಕ್ಷೆಯಾಗಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ. ಆನಾಥೆ ಅಂಜಲಿಗೆ ನ್ಯಾಯ ಕೊಡಿಸೋದಕ್ಕೆ ಸಂಘಟನೆಗಳು ಹೋರಾಡ ಬೇಕಾಗಿದೆ. ಎನ್ ಮಾಡೋದು ಲೋಕಸಭಾ ಚುನಾವಣೆ ಮುಗಿದಿದೆ. ಪ್ರತಿಭಟನೆ ಮಾಡುವವರು ನಿದ್ರೆಗೆ ಶರಣಾಗಿದ್ದಾರೆ. ಅನಾಥೆ ಶವವಾಗಿ ಮಲಗಿದ್ದಾಳೆ. ಆಕೆಯ ಆತ್ಮಕ್ಕೆ ಶಾಂತಿ ಸಿಗಲಿ, ಪಾಪಿ ಗಿರೀಶನಿಗೆ ಗಲ್ಲು ಶಿಕ್ಷೆಯಾಗಲಿ
