ಹುಬ್ಬಳ್ಳಿ, ಉತ್ತರ ಕರ್ನಾಟಕದ ಹೆಬ್ಬಾಗಿಲು ಹಾಗೆಯೇ ಧಾರವಾಡಕ್ಕೆ ಶಿಕ್ಷಣ ಕಾಶಿ ಎಂದು ಹೆಸರು. ಇವೆರಡು ನಗರಗಳು ಇದೀಗ ಡ್ರಗ್ಸ್ ಸಿಟಿಯಾಗುತ್ತಿವೆ.
ರಾಜ್ಯದ ಎರಡನೇ ರಾಜಧಾನಿ ಎಂದು ಕರೆಯಲ್ಪಡುವ ಹುಬ್ಬಳ್ಳಿ ಧಾರವಾಡ ಅವಳಿ ನಗರ ಈಗ ಮೊದಲಿನಂತಿಲ್ಲ. ಅವಳಿ ನಗರದ ಮೂಲೆ ಮೂಲೆಗಳಲ್ಲಿ ಗಾಂಜಾದಂತಹ ಆಕ್ರಮ ದಂಧೆ ಎಗ್ಗಿಲ್ಲದೇ ನಡೆಯುತ್ತಿದೆ. ಗಾಂಜಾ ವಾಸನೆ ಪೊಲೀಸರ ಮೂಗಿಗೆ ಬಡಿದರು ಸಹ, ಗೊತ್ತಿಲ್ಲದಂತೆ ಇರುವದು ಗೌಪ್ಯವಾಗಿ ಉಳಿದಿಲ್ಲ.
ಹುಬ್ಬಳ್ಳಿ ಧಾರವಾಡದ ಕಾಲೇಜುಗಳ ವಿಧ್ಯಾರ್ಥಿಗಳು ಡ್ರಗ್ಸ್ ದಾಸರಾಗಿರುವದು ಸೂರ್ಯನಷ್ಟೇ ಸತ್ಯವಾದರು ಸಹ, ಆಮದನಿ ಚೆನ್ನಾಗಿದೆ ಅನ್ನೋ ಕಾರಣಕ್ಕೆ ಸುಮ್ಮನಿರುವದು ಅಷ್ಟೇ ಸತ್ಯ ಎಂದು ಜನ ಮಾತನಾಡಿಕೊಳ್ಳುತ್ತಿದ್ದಾರೆ.
ಹುಬ್ಬಳ್ಳಿಯ ನೇಹಾ ಹಿರೇಮಠ ಕೊಲೆ ಪ್ರಕರಣದ ಆರೋಪಿ ಫಯಾಜ್ ಗಾಂಜಾ ದಾಸನಾಗಿದ್ದ. ಅಲ್ಲದೆ ನಿನ್ನೆ ಹುಬ್ಬಳ್ಳಿಯಲ್ಲಿ ನಡೆದ ಅಂಜಲಿ ಅಂಬಿಗೇರ ಕೊಲೆ ಆರೋಪಿ ಗಿರೀಶ್ ಅಲಿಯಾಸ ವಿಶ್ವ ಎಂಬ ಕ್ರೂರಿ ಸಹ ಗಾಂಜಾ ಗಿರಾಕಿ. ಇವೆರಡು ಕೊಲೆಗಳು ಗಾಂಜಾ ನಶೆಯಲ್ಲಿಯೇ ನಡೆದಿವೆ ಎಂದು ಹೇಳಲಾಗುತ್ತಿದೆ.
ಅವಳಿ ನಗರದಲ್ಲಿ ಇಷ್ಟೆಲ್ಲಾ ಗಾಂಜಾ ವ್ಯಾಪಾರ ಖುಲ್ಲಂ ಖುಲ್ಲಾ ನಡೆದಿದ್ದರು, ಹುಬ್ಬಳ್ಳಿ ಧಾರವಾಡ ಮಹಾನಗರ ಪೊಲೀಸರು ಡ್ರಗ್ಸ್ ದಂದೆಯ ಕಿಂಗ್ ಪಿನ್ ಬಂಧನ ಮಾಡದಿರುವದು ಅಪಾಯಕ್ಕೆ ಮತ್ತಷ್ಟು ಆಹ್ವಾನವಾ ಎಂದು ಜನ ಪ್ರಶ್ನಿಸ ತೊಡಗಿದ್ದಾರೆ. ಇದೆಲ್ಲದರ ಮಧ್ಯೆ ಸಧ್ಯ ಇರುವ ಪೊಲೀಸ್ ಅಧಿಕಾರಿಗಳ ಬದಲು ದಕ್ಷ ಅಧಿಕಾರಿಗಳು ಅವಳಿ ನಗರಕ್ಕೆ ಬರಲಿ ಎಂದು ಸ್ವತಃ ಕಾಂಗ್ರೇಸ್ ನಾಯಕರೇ ಒತ್ತಾಯ ಮಾಡುತ್ತಿದ್ದಾರೆ.