ದೇಶವ್ಯಾಪಿ ಸುದ್ದಿಯಾಗಿದ್ದ ಹುಬ್ಬಳ್ಳಿಯ ನೇಹಾ ಹಿರೇಮಠ ಕೊಲೆ ಪ್ರಕರಣ ಮಾಸುವ ಮುನ್ನವೇ ಹುಬ್ಬಳ್ಳಿ ಅಂಜಲಿ ಎಂಬ ಯುವತಿಯ ಕೊಲೆಗೆ ಸಾಕ್ಷಿಯಾಗಿದೆ.
ಪೊಲೀಸರ ಕಾನೂನು ಸುವ್ಯವಸ್ಥೆಯ ಮೇಲೆ ಜನ ಆಕ್ರೋಶಗೊಂಡಿದ್ದು, ನೆಟ್ಟಿಗರು ಕ್ಲಾಸ್ ತೆಗೆದುಕೊಳ್ಳುತ್ತಿದ್ದರೆ, ರಾಜಕಾರಣಿಗಳು ಪೊಲೀಸ್ ಇಲಾಖೆಯ ವೈಫಲ್ಯದ ಬಗ್ಗೆ ಆರೋಪಿಸುತ್ತಿದ್ದಾರೆ.
ಅಂಜಲಿ ಎಂಬ ಯುವತಿಯನ್ನು ಗಿರೀಶ್ ಅಲಿಯಾಸ ವಿಶ್ವಾ ಎಂಬಾತ ಬರ್ಬರವಾಗಿ ಕೊಲೆ ಮಾಡಿ ಪರಾರಿಯಾಗಿದ್ದಾನೆ. ಆತನ ಹುಡುಕಾಟಕ್ಕೆ ತಂಡ ರಚನೆ ಮಾಡಲಾಗಿದೆ. ಇದೆಲ್ಲದರ ಮಧ್ಯೆ ಹುಬ್ಬಳ್ಳಿ ಹೆಣ್ಮಕ್ಕಳಿಗೆ ಸುರಕ್ಷಿತವಲ್ಲ ಅನ್ನೋ ಮಾತು ಕೇಳಿ ಬರುತ್ತಿದೆ.
ಇದೀಗ ಹುಬ್ಬಳ್ಳಿ ಧಾರವಾಡ ಮಹಾನಗರ ಪೊಲೀಸ್ ಇಲಾಖೆ ಚೆನ್ನಮ್ಮ ಎಂಬ ಮಹಿಳಾ ಪೊಲೀಸ್ ಪಡೆಯನ್ನು ರಚನೆ ಮಾಡಿದೆ. ಈ ಚೆನ್ನಮ್ಮ ಪಡೆ ಹುಬ್ಬಳ್ಳಿ ಧಾರವಾಡದ ಶಾಲಾ ಕಾಲೇಜುಗಳು, ಬಸ್ ನಿಲ್ದಾಣ, ಜನನಿಬೀಡ ರಸ್ತೆಗಳಲ್ಲಿ ಗಸ್ತು ನಡೆಸಲಿದೆ. ಯುವತಿಯರನ್ನು ಚುಡಾಯಿಸುವವರ ಹೆಡಮುರಿಗೆ ಕಟ್ಟಲಿದೆ.