ಸುಪ್ರೀಂ ಕೋರ್ಟ್ ಬಾರ್ ಅಸೋಸಿಯೇಷನ್ ಅಧ್ಯಕ್ಷರಾಗಿ ಜನಪ್ರಿಯ ನ್ಯಾಯವಾದಿ ಕಪಿಲ್ ಸಿಬಲ್ ಆಯ್ಕೆಯಾಗಿದ್ದಾರೆ. ಅವರು ತಮ್ಮ ಸಮೀಪದ ಪ್ರತಿಸ್ಪರ್ಧಿ ಹಿರಿಯ ವಕೀಲ ಪ್ರದೀಪ್ ರೈ ಅವರನ್ನು ಸೋಲಿಸಿದ್ದಾರೆ.
ಸಿಬಲ್ ಅವರು 1,066 ಮತಗಳನ್ನು ಪಡೆದರೆ, ಸಮೀಪದ ಪ್ರತಿಸ್ಪರ್ಧಿ ಹಿರಿಯ ವಕೀಲ ಪ್ರದೀಪ್ ರೈ ಅವರು 689 ಮತಗಳನ್ನು ಪಡೆದರು.
ಸಿಬಲ್ ಅವರು 2001-02ರಲ್ಲಿ SCBA ಅಧ್ಯಕ್ಷರಾಗಿ ಕೊನೆಯ ಬಾರಿ ಸೇವೆ ಸಲ್ಲಿಸಿದ್ದರು. ಅವರು ಅದಕ್ಕೂ ಮೊದಲು ಎರಡು ಬಾರಿ ಸೇವೆ ಸಲ್ಲಿಸಿದ್ದಾರೆ. ಕಪಿಲ್ ಸಿಬಲ್ ಕ್ರಮವಾಗಿ – 1995-1996, 1997-1998 ರಲ್ಲಿ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ.