ಧಾರವಾಡ ಲೋಕಸಭಾ ಚುನಾವಣೆಯಲ್ಲಿ ಸಂಘಟಿತ ಕೆಲಸ ಮಾಡಿದ ಕಾಂಗ್ರೇಸ್ ಕಾರ್ಯಕರ್ತರ ಸಭೆ ಇಂದು ಹುಬ್ಬಳ್ಳಿಯಲ್ಲಿ ನಡೆಯಲಿದೆ. ಸಭೆಗೆ 8 ವಿಧಾನ ಸಭಾ ಕ್ಷೇತ್ರದ ಕಾಂಗ್ರೇಸ್ ಮುಖಂಡರನ್ನು ಆಹ್ವಾನಿಸಲಾಗಿದ್ದು, ಲೆಕ್ಕಾಚಾರ ನಡೆಯಲಿದೆ.
ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ನೇತೃತ್ವದಲ್ಲಿ ಸಭೆ ನಡೆಯಲಿದ್ದು, ಶಾಸಕ ಪ್ರಸಾದ ಅಬ್ಬಯ್ಯ, ಎನ್ ಎಚ್ ಕೋನರೆಡ್ಡಿ, ಅಭ್ಯರ್ಥಿ ವಿನೋದ ಅಸೂಟಿ ಭಾಗವಹಿಸಲಿದ್ದಾರೆ.
ಯಾವ ಯಾವ ಕ್ಷೇತ್ರದಲ್ಲಿ ಎಷ್ಟೇಷ್ಟು ಮತಗಳು ಬರಲಿವೆ ಅನ್ನೋದರ ಬಗ್ಗೆ ಸಭೆ ಮಾಹಿತಿ ಕಲೆ ಹಾಕಲಿದೆ. ಇದೇ ವೇಳೆ ಕಾಂಗ್ರೇಸ್ ಕಾರ್ಯಕರ್ತರಿಗೆ, ಮತದಾರರಿಗೆ ಅಭಿನಂದನೆ ಸಲ್ಲಿಸಲಾಗುತ್ತಿದೆ.