ಬರ ಪರಿಹಾರ ವಿತರಣೆಯಲ್ಲಿ ತಾರತಮ್ಯ ಮಾಡಲಾಗಿದ್ದು, ಆಕ್ರಮ ಎಸಗಲಾಗಿದೆ ಎಂದು ಹುಬ್ಬಳ್ಳಿ ಹಾಗೂ ಅಣ್ಣಿಗೇರಿ ತಾಲೂಕಿನ ರೈತರು ಧಾರವಾಡ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ರು.
ರಾಜ್ಯ ಸರ್ಕಾರ ಬರ ವಿತರಣೆ ಮಾಡಿದ ಬರ ಪರಿಹಾರ ಕೇವಲ ಶೇಕಡಾ 30 ರಷ್ಟು ಜನರಿಗೆ ಮಾತ್ರ ತಲುಪಿದ್ದು, ಅನ್ಯಾಯ ಮಾಡಲಾಗಿದೆ ಎಂದು ದೂರಿದರು. ಈ ಹಿಂದೆ ಸರ್ಕಾರದಿಂದ ಇನ್ ಪುಟ್ ಸಬ್ಸಿಡಿ ಎಂದು 2000 ರೂಪಾಯಿ ಗರಿಷ್ಟ 15 ಸಾವಿರ ನೀಡಲಾಗುತ್ತಿತ್ತು. ಆದ್ರೆ ಈ ಬಾರಿ ಅದು ರೈತರಿಗೆ ಬಂದಿಲ್ಲ ಎಂದು ಅಸಮಾಧಾನ ಹೊರಹಾಕಿದ್ದಾರೆ.
ಅಧಿಕಾರಿಗಳು ಬರ ಪರಿಹಾರ ತತ್ರಾಂಶದಲ್ಲಿ ಬಹಳಷ್ಟು ರೈತರ ಹೆಸರನ್ನು ಕೈ ಬಿಟ್ಟು ಆಕ್ರಮ ಎಸಗಿದ್ದಾರೆ ಎಂದು ರೈತರು ಆರೋಪಿಸಿದ್ದಾರೆ.
ಕೋಳಿವಾಡ, ಮಲ್ಲಿಗವಾಡ, ಭದ್ರಾಪುರ, ಶಿರಗುಪ್ಪಿ ರೈತರು, ಜಿಲ್ಲಾಧಿಕಾರಿಗೆ ಇಂದು ಮನವಿ ಸಲ್ಲಿಸಿದ್ದು, ಕೂಡಲೇ ಬರ ಪರಿಹಾರ ವಿತರಣೆ ಮಾಡದಿದ್ದಲ್ಲಿ ದೊಡ್ಡ ಮಟ್ಟದ ಹೋರಾಟ ಮಾಡುವದಾಗಿ ಎಚ್ಚರಿಸಿದ್ದಾರೆ.
ವಿ ಎನ್ ಪಾಟೀಲ, ರಾಜು ಕಂಪ್ಲಿ, ಹನುಮಂತಪ್ಪ ಕಂಬಳಿ, ಸುಭಾಸ ಬೂದಿಹಾಳ, ಶಂಬು ಅಂಗಡಿ ಸೇರಿದಂತೆ 20 ಕ್ಕೂ ಹೆಚ್ಚು ರೈತರು ಮನವಿ ಸಲ್ಲಿಸಿದ್ರು.
