ನೇಹಾ ಹಿರೇಮಠ ಕೊಲೆ ಬಳಿಕ ಹುಬ್ಬಳ್ಳಿ ಮತ್ತೊಂದು ಯುವತಿಯ ಕೊಲೆಗೆ ಸಾಕ್ಷಿಯಾಗಿದೆ. ಅಂಜಲಿ ಎಂಬ ಯುವತಿಯ ಕೊಲೆ ನಡೆದಿದ್ದು, ಅಂಜಲಿ ಮನೆಗೆ ಇಂದು ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಭೇಟಿ ನೀಡಿ, ಸಾಂತ್ವನ ಹೇಳಿದರು.
ಅವಳಿ ನಗರದಲ್ಲಿ ಮಾದಕ ದ್ರವ್ಯ ಸಾಗಾಟ ಹಾಗೂ ಮಾರಾಟ ಅವ್ಯಾಹತವಾಗಿ ನಡೆದಿದೆ ಎಂಬ ದೂರುಗಳಿದ್ದು, ನಿಯಂತ್ರಣಕ್ಕಾಗಿ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳಲಾಗುವದು ಎಂದು ಸಂತೋಷ ಲಾಡ್ ತಿಳಿಸಿದ್ರು.
ನೇಹಾ ಕೊಲೆ ಪ್ರಕರಣದಂತೆ, ಅಂಜಲಿ ಕೊಲೆ ಪ್ರಕರಣವನ್ನು ಸಿ ಐ ಡಿ ಗೆ ವಹಿಸುವಂತೆ ಸಂತೋಷ ಲಾಡ್ ಆಗ್ರಹಿಸಿದ್ರು. ಸೋಮವಾರ ಗೃಹ ಸಚಿವ ಜಿ ಪರಮೇಶ್ವರ ಹುಬ್ಬಳ್ಳಿಗೆ ಬರಲಿದ್ದಾರೆ. ತಪ್ಪು ಯಾರೇ ಮಾಡಿದರು ಸಹ ಅವರ ಮೇಲೆ ಕಠಿಣ ಕ್ರಮ ಕೈಗೊಳ್ಳಲಾಗುವದು ಎಂದರು