ವಿಶ್ವಾಧ್ಯಂತ ಅತ್ಯಂತ ಗರಿಷ್ಟ ಮಟ್ಟದಲ್ಲಿ ಮಾರಾಟವಾಗುತ್ತಿದ್ದ ಭಾರತದ MDH ಹಾಗೂ everest ಮಸಾಲೆ ಉತ್ಪನ್ನಗಳ ಮೇಲೆ ನೇಪಾಳ ಸರ್ಕಾರ ನಿಷೇಧ ಹೇರಿದೆ. MDH ಹಾಗೂ everest ಮಸಾಲೆಗಳಲ್ಲಿ ಹಾನಿಕಾರಕ ರಸಾಯನಿಕ ಪತ್ತೆಯಾಗಿದೆ. ಇದನ್ನು ಬಳಸುವದರಿಂದ ಆರೋಗ್ಯದ ಮೇಲೆ ದುಷ್ಪರಿಣಾಮ ಬೀಳುತ್ತದೆ ಎಂದು ನೇಪಾಳ ಸರ್ಕಾರದ ಆಹಾರ ಗುಣಮಟ್ಟ ನಿಯಂತ್ರಣ ಪ್ರಾಧಿಕಾರ ತಿಳಿಸಿದೆ.
ಹಾನಿಕಾರಕ ರಸಾಯನಿಕ ಇರುವ ಇವೆರಡು ಉತ್ಪನ್ನಗಳನ್ನು ಈಗಾಗಲೇ ಸಿಂಗಪುರ ಹಾಗೂ ಹಾಂಗ್ ಕಾಂಗ್ ನಲ್ಲಿಯೂ ನಿಷೇಧ ಹೇರಲಾಗಿದ್ದು, ಭಾರತದಲ್ಲಿ ಮಾತ್ರ ಎಂದಿನಂತೆ ಮಾರಾಟ ಮಾಡಲಾಗುತ್ತಿದೆ.