ಬಾಲಿವುಡ್ ನಟ ಶಾರುಖ್ ಖಾನ್ ದಿಡೀರ ಅಸ್ವಸ್ಥಗೊಂಡಿದ್ದಾರೆ. ಗುಜರಾತ ಪ್ರವಾಸದಲ್ಲಿದ್ದ ಶಾರುಖ್ ಖಾನ್ ಆರೋಗ್ಯದಲ್ಲಿ ಏರುಪೇರು ಕಂಡು ಬಂದಿದೆ. ತಕ್ಷಣ ಅವರನ್ನು ಅಹಮದಾಬಾದನಲ್ಲಿರುವ ಆಸ್ಪತ್ರೆಗೆ ಧಾಖಲಿಸಲಾಗಿದೆ.
ಶಾರುಖ್ ಖಾನ್ ಆಸ್ಪತ್ರೆಗೆ ಧಾಖಲಾದ ಸುದ್ದಿ ತಿಳಿಯುತ್ತಿದ್ದಂತೆ ಮುಂಬೈಯಲ್ಲಿದ್ದ ಅವರ ಪತ್ನಿ ಗೌರಿ ಖಾನ್ ಆಸ್ಪತ್ರೆಗೆ ದೌಡಾಯಿಸಿದ್ದಾರೆ. ಶಾರುಖ್ ಖಾನ್ ಗೆ ವಿಶೇಷ ವೈದ್ಯರ ತಂಡ ಚಿಕಿತ್ಸೆ ನೀಡುತ್ತಿದ್ದು, ಆರೋಗ್ಯದ ಬಗ್ಗೆ ವೈದ್ಯರು ಇನ್ನಷ್ಟೇ ದೃಢಪಡಿಸಬೇಕಾಗಿದೆ