ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಮುಸ್ಲಿಂ ಮೀಸಲಾತಿ ವಿಚಾರವನ್ನು ಪ್ರಸ್ತಾಪಿಸಿರುವ ಬಿಜೆಪಿ ನಾಯಕರು, ವಿವಾದದ ಕಿಡಿ ಹೊತ್ತಿಸಿದ್ದಾರೆ. ಇದೀಗ ಮತ್ತೊಂದು ವಿವಾದ ತಲೆದೋರಿದ್ದು, ಲೋಕಸಭಾ ಚುನಾವಣೆ ಫಲಿತಾಂಶ ಬಂದ ಬಂದ ನಂತರ ಮುಸ್ಲಿಂ ಮೀಸಲಾತಿ ಕುರಿತು ಪುನರ್ ಪರಿಶೀಲನೆ ನಡೆಸುವದಾಗಿ ರಾಜಸ್ಥಾನ ಸರ್ಕಾರದ ಸಚಿವನೊಬ್ಬ ಹೇಳಿಕೆ ನೀಡಿದ್ದಾನೆ.
ರಾಜಸ್ಥಾನದ ಸಮಾಜ ಕಲ್ಯಾಣ ಇಲಾಖೆ ಸಚಿವ, ಅವಿನಾಶ ಗೆಹಲೋಟ್ ಹೇಳಿಕೆ ನೀಡಿದ್ದು, ಮುಸ್ಲಿಮ್ ಧರ್ಮದ 14 ಜಾತಿಗಳಿಗೆ ಓ ಬಿ ಸಿ ಅಡಿ ನೀಡಿರುವ ಮೀಸಲಾತಿ ಕುರಿತು ಸರ್ಕಾರ ಪುನರ್ ಪರಿಶೀಲನೆ ನಡೆಸಲಿದೆ ಎಂದು ತಿಳಿಸಿದ್ದಾರೆ.
