ಹಾಸನ ಸಂಸದ ಪ್ರಜ್ವಲ್ ರೇವಣ್ಣ ಅವರಿಗೆ ಸಂಬಂಧಿಸಿದೆ ಎಂದು ಹೇಳಲಾದ ಅಶ್ಲೀಲ ವಿಡಿಯೋ ಪ್ರಕರಣದ ತನಿಖೆ ಎಸ್ ಐ ಟಿ ತೀವ್ರಗೊಳಿಸಿದ ಬೆನ್ನಲ್ಲೇ ಪ್ರಜ್ವಲ್ ರೇವಣ್ಣ ವಿಡಿಯೋ ಹಂಚಿಕೊಂಡಿದ್ದಾರೆ.
ಮಾತಿನ ಆರಂಭದಲ್ಲಿ ಕುಟುಂಬಸ್ಥರ, ನಾಡಿನ ಜನರ ಕ್ಷಮೆ ಕೇಳಿರುವ ಪ್ರಜ್ವಲ್ ರೇವಣ್ಣ ತಮ್ಮ ಮೇಲೆ ರಾಜಕೀಯ ಪಿತೂರಿ ನಡೆದಿದೆ ಎಂದು ಹೇಳಿದ್ದಾರೆ. ಅಲ್ಲದೆ ಇದೆ ಶುಕ್ರವಾರ ಮುಂಜಾನೆ 10 ಘಂಟೆಗೆ ಸ್ವದೇಶಕ್ಕೆ ಬಂದು ನೇರವಾಗಿ ಎಸ್ ಐ ಟಿ ಎದುರು ಹಾಜರಾಗುವದಾಗಿ ಹೇಳಿದ್ದಾರೆ.
