ಧಾರವಾಡದ ಪ್ರಗತಿ ಪರ ಸಂಘಟನೆಗಳ ಆಶ್ರಯದಲ್ಲಿ ಇಂದು ರಾಜ್ಯದಲ್ಲಿ ಮಹಿಳೆಯರ ಮೇಲೆ ನಡೆದಿರುವ ದೌರ್ಜನ್ಯ ಖಂಡಿಸಿ ಬೃಹತ್ ಮೌನ ಪ್ರತಿಭಟನೆ ಜಾಥಾ ನಡೆಸಲಾಯಿತು.
ಹತ್ಯೆಯಾದ ಹುಬ್ಬಳ್ಳಿಯ ನೇಹಾ ಹಿರೇಮಠ, ಅಂಜಲಿ ಅಂಬಿಗೇರ ಹಾಗೂ ಹಾಸನದ ಸಂಸದ ಪ್ರಜ್ವಲ್ ರೇವಣ್ಣ ಬಂಧನಕ್ಕೆ ಆಗ್ರಹಿಸಿ ಧಾರವಾಡದಲ್ಲಿ ಮಹಿಳೆಯರು ಬೀದಿಗೆ ಇಳಿದಿದ್ದರು.
ಕಲಾಭವನದಿಂದ ಆರಂಭವಾದ ಮೆರವಣಿಗೆ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಕಡಪಾ ಮೈದಾನದಲ್ಲಿ ಕೊನೆಗೊಂಡಿತು. ಮೌನ ಪ್ರತಿಭಟನಾ ಜಾಥಾದಲ್ಲಿ 500 ಕ್ಕು ಹೆಚ್ಚು ಜನ ಭಾಗವಹಿಸಿದ್ದರು.
