Download Our App

Follow us

Home » ಭಾರತ » ಜರ್ಮನಿಯ ಮ್ಯೂನಿಚ್ ದಿಂದ ಪ್ರಜ್ವಲ್ ಟಿಕೇಟ್ ಬುಕ್ ! ಈ ನಗರ ಯಾವದಕ್ಕೆ ಫೇಮಸ್ ಗೊತ್ತಾ!

ಜರ್ಮನಿಯ ಮ್ಯೂನಿಚ್ ದಿಂದ ಪ್ರಜ್ವಲ್ ಟಿಕೇಟ್ ಬುಕ್ ! ಈ ನಗರ ಯಾವದಕ್ಕೆ ಫೇಮಸ್ ಗೊತ್ತಾ!

ಅಶ್ಲೀಲ ವಿಡಿಯೋ ಪ್ರಕರಣಕ್ಕೆ ಸಂಬಂಧಿಸಿದಂತೆ ಬೇಕಾಗಿರುವ ಹಾಸನದ ಸಂಸದ ಪ್ರಜ್ವಲ್ ರೇವಣ್ಣ ಭಾರತಕ್ಕೆ ಮರಳಲು ಸಜ್ಜಾಗಿದ್ದಾರೆ. ಜರ್ಮನಿಯ ಮ್ಯೂನಿಚ್ ದಿಂದ ಪ್ರಜ್ವಲ್ ಟಿಕೇಟ್ ಬುಕ್ ಮಾಡಿದ್ದು ಮೇ 31 ರ ಮದ್ಯರಾತ್ರಿ ಬೆಂಗಳೂರಿಗೆ ತಲುಪಲಿದ್ದಾರೆ. ಲುಫ್ತಾನ್ಸಾ ವಿಮಾನದಲ್ಲಿ ಟಿಕೇಟ್ ಬುಕ್ ಮಾಡಿಸಿಕೊಂಡಿರುವ ಪ್ರಜ್ವಲ್ ನೇರವಾಗಿ ಎಸ್ ಐ ಟಿ ಎದುರು ಹಾಜರಾಗಲಿದ್ದಾರೆ. ಬೆಂಗಳೂರು ವಿಮಾನ ನಿಲ್ದಾಣಕ್ಕೆ ಪ್ರಜ್ವಲ್ ಬರುತ್ತಿದ್ದಂತೆ ಎಸ್ ಐ ಟಿ ಅಧಿಕಾರಿಗಳು ಅವರನ್ನು ಬಂಧಿಸುವ ಸಾಧ್ಯತೆ ಇದೆ.

ಮೊನ್ನೆಯಷ್ಟೇ ವಿಡಿಯೋ ಬಿಡುಗಡೆ ಮಾಡಿ ಹೇಳಿಕೆ ಕೊಟ್ಟಿದ್ದ ಪ್ರಜ್ವಲ್ ಶುಕ್ರವಾರ ಬರುವದಾಗಿ ಹೇಳಿದ್ದರು.

ಜರ್ಮನಿಯ ಮ್ಯೂನಿಚ್ ನಗರದ ವಿಶೇಷತೆ ! 

“2024 ರಲ್ಲಿ ಜರ್ಮನಿಯ ವಿದ್ಯಾರ್ಥಿಗಳಿಗೆ ಮ್ಯೂನಿಚ್ ಅಗ್ರಸ್ಥಾನವನ್ನು ಹೊಂದಿದೆ. ಬವೇರಿಯಾದ ರಾಜಧಾನಿಯಾಗಿ, ಇದು ರಾಜ್ಯದ 55,291 ಅಂತರರಾಷ್ಟ್ರೀಯ ವಿದ್ಯಾರ್ಥಿಗಳ ಅಧ್ಯಯನಕ್ಕೆ ಆತಿಥ್ಯ ನೀಡುವ ಕೇಂದ್ರ ಕೇಂದ್ರವಾಗಿದೆ. 

“ಮಿಲಿಯನ್ ಜನರ ಗ್ರಾಮ” ಎಂದು ಕರೆಯಲ್ಪಡುವ ಈ ರೋಮಾಂಚಕ ನಗರವು ವಿಶ್ವದ ಅತ್ಯುತ್ತಮ ವಿದ್ಯಾರ್ಥಿ ನಗರಗಳಲ್ಲಿ ಒಂದಾಗಿದೆ.

Karnataka Files
Author: Karnataka Files

Leave a Comment

RELATED LATEST NEWS

error: Content is protected !!