ಹುಬ್ಬಳ್ಳಿಯ ನೇಹಾ ಹಿರೇಮಠ ಕೊಲೆ ನಡೆಯುತ್ತಿದ್ದಂತೆ ರಾಜ್ಯದಾಧ್ಯಂತ ಆಕ್ರೋಶ ಮಡುಗಟ್ಟಿತ್ತು. ಇದಾದ ಬಳಿಕ ಸರ್ಕಾರ ಈ ಪ್ರಕರಣ ಸಿ ಐ ಡಿ ಗೆ ವಹಿಸಿತ್ತು. ಆದ್ರೆ ಸಾವಿನ ಮನೆಯಲ್ಲಿಯೂ ಸತ್ಯ ಮರೆ ಮಾಚುವಂತೆ ರಾಜಕೀಯ ನಡೆದಿದ್ದನ್ನು ದಲಿತ ಸಂಘಟನೆಗಳ ಮಹಾಮಂಡಳ ಬಯಲಿಗೆ ಎಳೆದಿದೆ.
ಅಸಲಿಗೆ ವಿಷಯ ಏನು ಅಂತಂದರೆ, ನಿರಂಜನ ಹಿರೇಮಠ ಹುಬ್ಬಳ್ಳಿ ನಿವಾಸಿಯಾಗಿದ್ದು, ಬೆಂಗಳೂರು ನಿವಾಸಿ ಎಂದು ಧಾಖಲೆ ತೋರಿಸಿ ಮಗಳು ನೇಹಾಗೆ ಖೊಟ್ಟಿ ಜಾತಿ ಪ್ರಮಾಣ ಪತ್ರ ಕೊಡಿಸಿದ ಆರೋಪ ಕೇಳಿ ಬಂದಿದೆ. ಖೊಟ್ಟಿ ಬೇಡ ಜಂಗಮ ಜಾತಿ ಪ್ರಮಾಣ ಪತ್ರ ಕೊಡಿಸಿ ಪರಿಶಿಷ್ಟ ಜಾತಿಗೆ ಸಿಗುವ ಹಕ್ಕನ್ನು ದುರುಪಯೋಗ ಪಡೆಸಿಕೊಂಡಿದ್ದಾರೆ ಎಂದು ಗುರುನಾಥ ಉಳ್ಳಿಕಾಶಿ ಧಾಖಲೆಯೊಂದಿಗೆ ಆರೋಪ ಮಾಡಿದ್ದಾರೆ.
ಅದನ್ನೇ ಇಟ್ಟುಕೊಂಡು ಮೀಸಲು ಕ್ಷೇತ್ರವಾಗಿರುವ ಹುಬ್ಬಳ್ಳಿ ಪೂರ್ವ ವಿಧಾನ ಸಭಾ ಚುನಾವಣೆಗೆ ನಿಲ್ಲುವ ಪ್ರಯತ್ನ ನಡೆಸಿದ್ರಾ ಅನ್ನೋ ಆರೋಪ ಮಾಡಿದ್ದಾರೆ. ಮಗಳು ನೇಹಾ ಕೊಲೆಯಾದ ಬಳಿಕ ಸತ್ಯ ಮರೆಮಾಚುವ ರಾಜಕೀಯ ನಡೆಸಿದ್ದರು ಎಂದು ಗುರುನಾಥ ಉಳ್ಳಿಕಾಶಿ ಬಯಲಿಗೆ ಎಳೆದಿದ್ದಾರೆ.
ಮುಖ್ಯಮಂತ್ರಿಗಳಿಗೆ ಪತ್ರ ಬರೆದಿರುವ ದಲಿತ ಸಂಘಟನೆಗಳ ಮಹಾಮಂಡಳ ತಕ್ಷಣ ಖೊಟ್ಟಿ ಜಾತಿ ಪ್ರಮಾಣ ಪತ್ರ ರದ್ದು ಮಾಡಿ, ಪ್ರಮಾಣ ಪತ್ರ ನೀಡಿದ ಅಧಿಕಾರಿ ಮತ್ತು ಸುಳ್ಳು ಮಾಹಿತಿ ಕೊಟ್ಟು ಪ್ರಮಾಣ ಪತ್ರ ಪಡೆದಿರುವವರ ಮೇಲೆ ಕ್ರಮ ಕೈಗೊಳ್ಳಬೇಕೆಂದು ಗುರುನಾಥ ಉಳ್ಳಿಕಾಶಿ ಆಗ್ರಹಿಸಿದ್ದಾರೆ.
